ಹಲ್ಲು ಹಳದಿಯಾಗಿದೆಯೇ…? ಇಲ್ಲಿದೆ ನೋಡಿ ಮನೆಮದ್ದು…

ನಿಮ್ಮ ಹಲ್ಲುಗಳು ಹೊಳೆಯುತ್ತಿದ್ದರೆ ನಿಮ್ಮ ಅಂದ ಮತ್ತಷ್ಟು ಹೆಚ್ಚುತ್ತದೆ. ಅಂತಹ ಹಲ್ಲುಗಳು ಬಿಳಿಯಾಗಿ, ಬಲಿಷ್ಠವಾಗಿ, ಹೊಳೆಯುತ್ತಿದ್ದರೆ ನೋಡುವುದಕ್ಕೂ ಸುಂದರವಾಗಿರುತ್ತದೆ. ಆದರೆ ಹಳದಿ ಹಲ್ಲು ಕಾಣಿಸಿದರೆ  ಅದರಿಂದ ಆತ್ಮವಿಶ್ವಾಸ ಸಹ ಕುಂಠಿತವಾಗುತ್ತದೆ. ಆದ್ದರಿಂದ ಹಲ್ಲುಗಳ ಆರೈಕೆ ತುಂಬಾ ಮುಖ್ಯ.

ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಲು ಸಾಕಷ್ಟು ಕಾರಣಗಳಿವೆ. ಹಲ್ಲಿನಲ್ಲಿ ವಿಟಮಿನ್‌ ಡಿ ಕೊರತೆ ಉಂಟಾದರೆ ಹಲ್ಲು ಬಿಳಿಯ ಬಣ್ಣಕ್ಕೆ ತಿರುಗುತ್ತದೆ. ಜೊತೆಗೆ ಚಹಾ ಸೇವನೆ, ಧೂಮಪಾನ, ಕಾಫಿ, ಸೋಡಾ, ಐಸ್‌ ಕ್ಯಾಂಡಿಯಂತಹ ವಸ್ತುಗಳು ಹಲ್ಲುಗಳು ಹಳದಿಗಟ್ಟುವಿಕೆಗೆ ಕಾರಣವಾಗುತ್ತದೆ.

ಖರ್ಚಿಲ್ಲದೆ ಹಲ್ಲುಗಳನ್ನು ಬಿಳಿ ಮಾಡುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಟಿಪ್ಸ್

1. ಒಂದು ಚಮಚ ಉಪ್ಪು, ಒಂದು ಚಮಚ ತೆಂಗಿನೆಣ್ಣೆ ಮತ್ತು ಅರ್ಧ ಚಮಚ ಅಡುಗೆ ಸೋಡಾವನ್ನು ಸೇರಿಸಿ  ಇದಕ್ಕೆ ಮೂರು ಚಮಚ ಲಿಂಬೆರಸ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.

2. ಎರಡು ನಿಮಿಷ ಕಾಲ ಈ ಪೇಸ್ಟ್ ನಿಂದ ಹಲ್ಲುಜ್ಜಿರಿ ಬಳಿಕ ಬಾಯಿ ತೊಳೆಯಿರಿ. ವಾರದಲ್ಲಿ ಎರಡು ದಿನ ಈ ರೀತಿ ಮಾಡಿದರೆ ಹಳದಿ ಹಲ್ಲು ಇಲ್ಲವಾಗುತ್ತದೆ.  ಈ ಪೇಸ್ಟ್ ಹಲ್ಲುಗಳಲ್ಲಿ ಇರುವ ಪದರ ಮತ್ತು ಕಲೆಗಳ ನಿವಾರಣೆ ಮಾಡಿ, ಹಲ್ಲುಗಳನ್ನು ಬ್ಲೀಚ್ ಮಾಡಿ ಬಿಳಿಯಾಗಿಸುವುದು.

3. ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ನಿಮ್ಮ ಹಳದಿ ದ೦ತಪ೦ಕ್ತಿಗಳನ್ನುಉಜ್ಜಿದರೆ  ಹಲ್ಲು ಬಿಳಿಯಾಗುತ್ತದೆ.

4. ಸ್ವಲ್ಪ ಅರಿಶಿನವನ್ನು ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿ ಇದರಿಂದ ಹಲ್ಲು ತಿಕ್ಕಿರಿ. ಐದು ನಿಮಿಷಗಳ ತರುವಾಯ ಹಲ್ಲುಗಳನ್ನು ತೊಳೆದುಕೊಳ್ಳಿ. ಹಳದಿ ಕಲೆಯನ್ನು ಹೋಗಲಾಡಿಸಲು ನಿಯಮಿತವಾಗಿ ಈ ವಿಧಾನವನ್ನು ಅನುಸರಿಸಿ… ಇಲ್ಲದಿದ್ದರೆ ಇನ್ನೊಂದು ವಿಧಾನವಿದೆ ಅರಿಶಿನವನ್ನು ಹಾಲಿನೊಂದಿಗೆ ಚೆನ್ನಾಗಿ ಬೆರೆಸಿ. ಆ ಪೇಸ್ಟನ್ನು ಹಲ್ಲುಗಳಿಗೆ ಲೇಪಿಸಿ. 3 ನಿಮಿಷಗಳ ನಂತರ ಹಲ್ಲುಗಳನ್ನು ಚೆನ್ನಾಗಿ ತೊಳೆಯುವುದರಿಂದ ಹಲ್ಲು ಬಿಳಿಯಾಗುತ್ತದೆ.

 

 

Comments are closed.

Social Media Auto Publish Powered By : XYZScripts.com