ಸಿಂಧನೂರಿನಲ್ಲಿ ಭೀಕರ ಅಪಘಾತ : ಒಂದೇ ಕುಟುಂಬದ ನಾಲ್ವರು ಬಲಿ

ಸಿಂಧನೂರು : ಟಂಟಂ ಹಾಗೂ ಕ್ಯಾಂಟರ್ ಮಧ್ಯೆ ಡಿಕ್ಕಿಯಾಗಿ  ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಐದು ಮಂದಿ ಸಾವಿಗೀಡಾಗಿರುವ ಘಟನೆ ಸಿಂಧನೂರಿನ 7ನೇ ಮೈಲ್‌ ಕ್ಯಾಂಪ್‌ ಬಳಿ ನಡೆದಿದೆ.

ಮೃತರನ್ನು ಈರಯ್ಯ ಸ್ವಾಮಿ, ಚಾಲಕ ಶಮೀದ್‌, ಸಬ್ವಲಿಸಾಬ್‌, ಖಾಜಮ್ಮ, ಲಾಲ್‌ ಬೀ ಸಬ್ವಲಿ ಸಾಬ್ ಎಂದು ಗುರುತಿಲಾಗಿದೆ. ಸಾವಿಗೀಡಾದವರೆಲ್ಲರೂ ಬೂತನದಿನ್ನಿ ಗ್ರಾಮದವರೆಂದು ತಿಳಿದುಬಂದಿದ್ದು, ಸಿಂಧನೂರಿನಲ್ಲಿ ಸಂತೆ ಮುಗಿಸಿ ವಾಪಸ್ಸಾಗುವ ವೇಳೆ ಘಟನೆ ಸಂಭವಿಸಿದೆ. ಸಿಂಧನೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

 

 

Comments are closed.