ಪತಂಜಲಿ ಕಂಪನಿಗಾಗಿ ಮೋದಿ ಸರ್ಕಾರದಿಂದ ಒಂದು ಪೈಸೆಯನ್ನೂ ಪಡೆದಿಲ್ಲ : ಬಾಬಾ ರಾಂದೇವ್‌

ದೆಹಲಿ : ದೇಶದ ಮಾರುಕಟ್ಟೆಯಲ್ಲಿ ಯೋಗಗುರು ಬಾಬಾರಾಂದೇವ್‌ ಅವರ ಪತಂಜಲಿ ಉತ್ಪನ್ನಗಳು ಹೆಚ್ಚು ಮಾರಾಟವಾಗುತ್ತಿವೆ. ಈ ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಬಾಬಾ ರಾಂದೇವ್ 500 ಸಾದುಗಳನ್ನು ತರಬೇತಿಗೊಳಿಸಿದ್ದು, ಅವರ ಮೂಲಕ ಪತಂಜಲಿ ಉತ್ಪನ್ನಗಳ ಮಾರಾಟವನ್ನು ನಾಲ್ಕು ವರ್ಷದಲ್ಲಿ 10ಸಾವಿರ ಕೋಟಿ ದಾಟಿಸುವುದಾಗಿ ಹೇಳಿದ್ದಾರೆ.

ಟಾಕ್‌ ಶೋ ಒಂದರಲ್ಲಿ ಮಾತನಾಡಿದ ಬಾಬಾ ರಾಂದೇವ್‌, ಮುಂದಿನ 1 ವರ್ಷದಲ್ಲಿ ಪತಂಜಲಿ 1ಲಕ್ಷ ಕೋಟಿ ಉತ್ಪನ್ನಗಳ ಉತ್ಪಾದನೆ ಮಾಡಲಿದೆ. ಸದ್ಯ ಹರಿದ್ವಾರದ ಫ್ಯಾಕ್ಟರಿ 15,000ಕೋಟಿ  ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು, ತೇಜ್‌ಪುರದಲ್ಲಿ 25 ಸಾವಿರ ಕೋಟಿ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಸದ್ಯದಲ್ಲೇ ನೋಯ್ಡಾ, ನಾಗ್ಪುರ, ಇಂದೋರ್‌ ಹಾಗೂ ಆಂಧ್ರಪ್ರದೇಶದಲ್ಲೂ ಉತ್ಪನ್ನಗಳ ತಯಾರಿಕಾ ಘಟಕ ತೆರೆಯಲಾಗುತ್ತಿದೆ.

ಈಗಾಗಲೆ ಅಡುಗೆ ಎಣ್ಣೆ, ಉಪ್ಪು ಮುಂತಾದ ಚಿಕ್ಕಚಿಕ್ಕ ಉತ್ಪನ್ನಗಳನ್ನು ತಯಾರಿಸುವ 50 ಚಿಕ್ಕ ಚಿಕ್ಕ ಘಟಕಗಳನ್ನು ಹೊಂದಿದ್ದೇವೆ. 1ಲಕ್ಷ ಕೋಟಿ ಉತ್ಪನ್ನಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಮಾರುಕಟ್ಟೆಯಲ್ಲಿ 10 ಲಕ್ಷ ಕೋಟಿಯಲ್ಲಿ ಶೇ 10ರಷ್ಟು ಲಾಭಗಳಿಸಬಹುದು ಎಂದಿದ್ದಾರೆ.

ಜೊತೆಗೆ ಸದ್ಯದಲ್ಲೇ ಜೀನ್ಸ್‌ ಕುರ್ತಾ, ಶರ್ಟ್‌, ಸೂಟಿಂಗ್ಸ್‌, ಕ್ರೀಡಾ ಉಡುಪುಗಳು, ಯೋಗ ಉಡುಪುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇದೇ ವೇಳೆ ಹಸುವಿನ ತುಪ್ಪ, ಬೆಣ್ಣೆಯ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವಂತೆ ಅರುಣ್‌ ಜೇಟ್ಲಿಯವರಲ್ಲಿ ಮನವಿ ಮಾಡಿದ್ದಾರೆಯ.

ಇದೇ ವೇಳೆ ಪತಂಜಲಿ ಕಂಪನಿಗೆ ರಾಜಕೀಯ ವ್ಯಕ್ತಿಗಳ ಹಣ ಹೂಡಿಕೆ ಮಾಡಿದ್ದಾರೆ ಎಂಬ ವಿಷಯ ಕುರಿತಂತೆ ಹೇಳಿಕೆ ನೀಡಿರುವ ರಾಂದೇವ್‌, ಪತಂಜಲಿ ಕಂಪನಿಗೂ ರಾಜಕಾರಣಿಗಳಿಗೂ ಯಾವುದೇ ಸಂಬಂಧವಿಲ್ಲ. ಮೋದಿ ಸರ್ಕಾರದಿಂದ ನಾನು ಒಂದು ಪೈಸೆಯನ್ನೂ ಪಡೆದಿಲ್ಲ ಎಂದಿದ್ದಾರೆ.
 

One thought on “ಪತಂಜಲಿ ಕಂಪನಿಗಾಗಿ ಮೋದಿ ಸರ್ಕಾರದಿಂದ ಒಂದು ಪೈಸೆಯನ್ನೂ ಪಡೆದಿಲ್ಲ : ಬಾಬಾ ರಾಂದೇವ್‌

 • October 24, 2017 at 3:33 PM
  Permalink

  Hey there would you mind letting me know which web host you’re
  utilizing? I’ve loaded your blog in 3 different web browsers and I must
  say this blog loads a lot quicker then most. Can you recommend a good web hosting provider at a
  honest price? Kudos, I appreciate it!

Comments are closed.

Social Media Auto Publish Powered By : XYZScripts.com