ನೋಟ್ ಬ್ಯಾನ್‌ನಂತೆ, ಬುಲೆಟ್‌ ರೈಲು ಸಹ ಎಲ್ಲವನ್ನು ಕೊಲ್ಲುತ್ತದೆ : ಪಿ. ಚಿದಂಬರಂ

ದೆಹಲಿ : ಎನ್‌ಡಿಎ ಸರ್ಕಾರದ ಬುಲೆಟ್‌ ರೈಲು ಯೋಜನೆ, ನೋಟ್‌ ಬ್ಯಾನ್‌ನಂತೆ ಜನರ ಸುರಕ್ಷತೆ ಸೇರಿದಂತೆ ಎಲ್ಲವನ್ನೂ ಕೊಲ್ಲುವುದಾಗಿ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮೋದಿ ಸರ್ಕಾರದ ನೋಟು ಅಮಾನ್ಯೀಕರಣ ವಿಚಾರ ಕುರಿತಂತೆ ಮಾಜಿ ಹಣಕಾಸು ಸಚಿವ ಚಿದಂಬರಂ ಟೀಕೆ ವ್ಯಕ್ತಪಡಿಸಿದ್ದರು.

ನೋಟ್‌ ಬ್ಯಾನ್‌ನಿಂದಾಗಿ ದೇಶದ ಆರ್ಥಿಕತೆ ಕುಸಿಯುತ್ತಿದೆ ಎಂದು ಎನ್‌ಡಿಎ ಸರ್ಕಾರದ ನಿರ್ಧಾರದ ಕುರಿತು ಆರೋಪಿಸಿದ್ದರು. ಈಗ ಬುಲೆಟ್‌ ರೈಲು ಯೋಜನೆ ಸಹ ಜನರ ಸುರಕ್ಷತೆ ಸೇರಿದಂತೆ  ಎಲ್ಲವನ್ನು ಕಸಿದುಕೊಳ್ಳುತ್ತದೆ ಎಂದಿದ್ದಾರೆ.

ಬುಲೆಟ್‌ ರೈಲು ಸಾಮಾನ್ಯ ಜನರಿಗಾಗಿ ಅಲ್ಲ. ಅದು ಮೇಲ್ವರ್ಗದ ಜನರಿಗೆ ಮೀಸಲಾಗಿರುತ್ತದೆ. ನೀವು ಬಡ ಪ್ರಮಾಣಿಕರನ್ನು ಸಾಯಲು ಬಿಟ್ಟು, ದುಡ್ಡಿರುವವರಿಗಾಗಿ ಬುಲೆಟ್ ರೈಲು ಮಾಡಲು ಹೊರಟಿದ್ದೀರಿ. ಇದು ನಿಜಕ್ಕೂ ನೋವಿನ ಸಂಗತಿ. ನೋವಿನ ಹಿಂದೆ ತಲೆಕೆಳಗಾದ ಯೋಜನೆಯ ಕಥೆ ಇದೆ. ಜನರಿಗೆ ಬುಲೆಟ್‌ ರೈಲಿನ ಅಗತ್ಯವಿಲ್ಲ. ಜನರಿಗೆ ರಕ್ಷಣೆ ಬೇಕು ಎಂದಿದ್ದಾರೆ.

 

 

Comments are closed.

Social Media Auto Publish Powered By : XYZScripts.com