ಮುಂಬೈ ದುರಂತ :ಕೊನೆಗೂ ಎಚ್ಚೆತ್ತ ರೈಲ್ವೇ ಸಚಿವರು : ರೈಲು ನಿಲ್ದಾಣಕ್ಕೆ ಹೆಚ್ಚುವರಿ ಎಸ್ಕಲೇಟರ್‌ ಮಂಜೂರು

ಮುಂಬೈ : ಮುಂಬೈನ ಎಲ್ಫಿನ್‌ಸ್ಟನ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾಗಿ 23 ಮಂದಿ ಮೃತಪಟ್ಟ ಬಳಿಕ ಎಚ್ಚೆತ್ತಿರುವ ರೈಲ್ವೇ ಸಚಿವ ಪೀಯೂಶ್‌ ಗೋಯಲ್‌, ಅವಗಢ ಸಂಭವಿಸಿದ ರೈಲು ನಿಲ್ದಾಣಕ್ಕೆ ಹೆಚ್ಚುವರಿಯಾಗಿ ಎಸ್ಕಲೇಟರ್‌ಗಳನ್ನು ಮಂಜೂರು ಮಾಡುವುದಾಗಿ ಘೋಷಿಸಿದ್ದಾರೆ.

ದುರಂತ ಸಂಭವಿಸಿರುವ ರೈಲು ನಿಲ್ದಾಣಕ್ಕೆ ಆಗಮಿಸಿದ್ದ ಪೀಯೂಶ್‌ ಗೋಯಲ್, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು,  ತ್ವರಿತ ಗತಿಯಲ್ಲಿ ಯೋಜನೆಗಳ ಜಾರಿ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಸಲುವಾಗಿ ಮುಖ್ಯ ಕಚೇರಿಯ 200 ಸಿಬ್ಬಂದಿಯನ್ನು ಸ್ಥಳಾಂತರಿಸಿರುವುದಾಗಿ ಹೇಳಿದ್ದಾರೆ.

ಜೊತೆಗೆ ಎಲ್ಫಿನ್‌ಸ್ಟನ್‌ ಹಾಗೂ ಮುಂಬೈನ ಜನಸಂದಣಿ ಹೆಚ್ಚಿರುವ ರೈಲು ನಿಲ್ದಾಣಗಳಿಗೆ ಎಸ್ಕಲೇಟರ್‌ ಮಂಜೂರು ಮಾಡಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

 

 

ಶುಕ್ರವಾರ ಬೆಳಗ್ಗೆ ಎಲ್ಫಿನ್‌ಸ್ಟನ್‌ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 23 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದವು. ದುರಂತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿತ್ತು. ಜೊತೆಗೆ ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಿಸಲಾಗಿತ್ತು.

 

Comments are closed.

Social Media Auto Publish Powered By : XYZScripts.com