ಮತ್ತೆ “ಇಂಡಿಯನ್ -2” ಆಗಿ ತೆರೆ ಮೇಲೆ ಮೋಡಿ ಮಾಡಲು ಬರ್ತಿದ್ದಾರೆ ಕಮಲ್‌ – ಶಂಕರ್‌

1996ರ ಸೂಪರ್ ಹಿಟ್ “ಇಂಡಿಯನ್” ಸಿನಿಮಾ ಹೊಸ ದಾಖಲೆ ಬರೆದಿತ್ತು. ಶಂಕರ್ ನಿರ್ದೇಶನದಲ್ಲಿ ಕಮಲ್ ಹಾಸನ್ ದ್ವಿಪಾತ್ರದಲ್ಲಿ ನಟಿಸಿದ್ದ ಈ ಥ್ರಿಲ್ಲರ್ ಸಿನಿಮಾ, ತೆಲುಗು, ಹಿಂದಿಗೆ ಡಬ್ ಆಗಿ ಸಕ್ಸಸ್ ಕಂಡಿತ್ತು. ಇದೀಗ ಈ ಚಿತ್ರದ ಸೀಕ್ವೆಲ್ ಬರ್ತಿದ್ದು, ಮತ್ತೆ ಶಂಕರ್, ಕಮಲ್ ಜೋಡಿ ಕಮಾಲ್ ಮಾಡೋಕೆ ಸಿದ್ದರಾಗ್ತಿದ್ದಾರೆ.  ಚಿತ್ರವನ್ನ ಟಾಲಿವುಡ್ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡಲಿದ್ದಾರೆ.

ಇಂಡಿಯನ್ ಚಿತ್ರದಲ್ಲಿ ಭ್ರಷ್ಟಚಾರಿಗಳಿಗೆ ಸಿಂಹಸ್ವಪ್ನವಾಗಿರುವ ಸೇನಾಪತಿ ಪಾತ್ರದಲ್ಲಿ ಕಮಲ್ ಅಭಿನಯ ಮೋಡಿ ಮಾಡಿತ್ತು. ಸ್ವತಃ ಮಗನೇ ಭ್ರಷ್ಟ ಅಂತ ಗೊತ್ತಾದಾಗ ಹಿಂದೆ ಮುಂದೆ ನೋಡದೇ ಮಗನನ್ನೇ ಕೊಲ್ಲುವ ಪಾತ್ರದಲ್ಲಿ ಕಮಲ್ ಮ್ಯಾಜಿಕ್ ಮಾಡಿದ್ರು. ಇದೀಗ ಸೀಕ್ವೆಲ್ ಬರ್ತಿರೋದು ಅಭಿಮಾನಿಗಳಿಗೆ ಸಖತ್ ಖುಷಿ‌ ಕೊಟ್ಟಿದೆ. ಶಂಕರ್ ಸದ್ಯ ರಜಿನಿಕಾಂತ್, ಅಕ್ಷಯ್ ಕುಮಾರ್ ನಟಿಸ್ತಿರೋ 2.O ಚಿತ್ರ ನಿರ್ದೇಶಿಸುತ್ತಿದ್ದು, ಮುಂದಿನ ವರ್ಷ ಇಂಡಿಯನ್-2 ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದಾರೆ.
ಕಮಲ್ ಇದೇ ಚಿತ್ರವನ್ನ ವೇದಿಕೆ ಮಾಡ್ಕೊಂಡು ರಾಜಕೀಯ ಪ್ರವೇಶಿಸೋ ಸಾಧ್ಯತೆ ಇದೆ. ಏಪ್ರಿಲ್‌ ವೇಳೆಗೆ ಇಂಡಿಯನ್ ಸೀಕ್ವೆಲ್ ಸೆಟ್ಟೇರಲಿದೆ. ಇದು ರೋಬೋ ಸೀಕ್ವೆಲ್ ಚಿತ್ರವನ್ನೂ ಮೀರಿಸೋ ಸಾಧ್ಯತೆಯಿದೆ. ಇಂಡಿಯನ್ ಸಿನಿಮಾ ಸೀಕ್ವೆಲ್ ಬರ್ತಿದೆ ಅನ್ನೋ ವಿಚಾರವೇ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದೆ.

Comments are closed.