WATCH : ಐಸಿಸಿ ಹೊಸ ರೂಲ್ಸ್ : ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ತಪ್ಪು ಫೀಲ್ಡಿಂಗ್ಗಾಗಿ ದಂಡ
ಬ್ರಿಸ್ಬೇನ್ : ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನೂತನ ನಿಯಮಗಳು ಜಾರಿಯಾದ ಬಳಿಕ ಮೊದಲ ಬಾರಿಗೆ ಕ್ವೀನ್ಸ್ ಲ್ಯಾಂಡ್ನ ಕ್ರಿಕೆಟರ್ ತಪ್ಪು ಮಾಡಿದ್ದಕ್ಕಾಗಿ ದಂಡ ತೆರಬೇಕಾಗಿದೆ. ಬ್ರಿಸ್ಬೇನ್ನ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ ಕ್ವೀನ್ಸ್ ಲ್ಯಾಂಡ್ ಬುಲ್ಸ್ ತಂಡದ ನಡುವೆ ಜೆಎಲ್ಟಿ ಏಕದಿನ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಆಸ್ಟ್ರೇಲಿಯಾ ಆಟಗಾರ ಪಾರ್ಮ್ ಅಪ್ಪಲ್ ಬ್ಯಾಟಿಂಗ್ ಮಾಡಿದ್ದು, ಈ ವೇಳೆ ಬಾಲ್ ಹಿಡಿಯುವಲ್ಲಿ ಕ್ವೀನ್ ಲ್ಯಾಂಡ್ನ ಮಾರ್ನಸ್ ಲ್ಯಾಗಸ್ಚೆ ವಿಫಲರಾಗಿದ್ದರು. ಬಾಲ್ ಹಿಡಿಯುವಲ್ಲಿ ವಿಫಲರಾಗಿದ್ದರೂ ಎದುರಾಳಿ ಆಟಗಾರರನ್ನು ಗೊಂದಲಕ್ಕೀಡುಮಾಡಲು ಚೆಂಡನ್ನು ವಿಕೇಟ್ ಕೀಪರ್ ಬಳಿ ಎಸೆಯುವಂತೆ ನಾಟಕವಾಡಿದ್ದರು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಮಾರ್ನಸ್ ಕ್ಷಮೆ ಯಾಚಿಸಿದ್ದರು. ಬಳಿಕ ಅಂಪೈರ್ಗಳಿಬ್ಬರೂ ಈ ಕುರಿತು ಚರ್ಚೆ ನಡೆಸಿ ದಂಡ ತೆರುವಂತೆ ಸೂಚನೆ ನೀಡಿದ್ದು, ಎದುರಾಳಿ ತಂಡಕ್ಕೆ ಐದು ರನ್ಗಳ ಪೆನಾಲ್ಟಿ ಸಿಕ್ಕಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಕ್ವೀನ್ಸ್ಲ್ಯಾಂಡ್ ಬುಲ್ಸ್ ವಿರುದ್ಧ ಜಯಸಾಧಿಸಿತ್ತು.
ಇತ್ತೀಚೆಗಷ್ಟೇ ಜಾರಿಯಾಗಿರುವ ಹೊಸ ನಿಯಮಾವಳಿ ಪ್ರಕಾರ ಬ್ಯಾಟ್ಸ್ಮನ್ ಬ್ಯಾಟಿಂಗ್ ಮಾಡಿದ ಮೇಲೆ ಆತನನ್ನು ಗೊಂದಲಕ್ಕೀಡು ಮಾಡುವುದು, ಬೇಕಂತಲೇ ಗಮನ ಬೇರೆಡೆ ಹರಿಸುವುದು, ಪದಗಳ ಮೂಲಕ ಅಥವಾ ಸನ್ನೆಯ ಮೂಲಕ ಗೊಂದಲ ಮೂಡಿಸುವುದು ಮಾಡುವಂತಿಲ್ಲ. ಆದರೆ ಕ್ವೀನ್ಸ್ಲ್ಯಾಂಡ್ನ ಆಟಗಾರ ಆ ರೀತಿ ಮಾಡಿದ್ದಕ್ಕಾಗಿ ಮೊದಲ ಬಾರಿಗೆ ಮಾರ್ನಸ್ ವಿರುದ್ದ ಕ್ರಮಕ್ಕೆ ನಿರ್ಧರಿಸಿದೆ.
Comments are closed.