ಭಾರತ-ಚೀನಾ ಮಧ್ಯೆ ಹೊಸ ಅಧ್ಯಾಯ ಪ್ರಾರಂಭವಾಗಲಿ : ಚೀನಾ

ದೆಹಲಿ : ಭಾರತ ಹಾಗೂ ಚೀನಾ ತಮ್ಮ ಸಂಬಂಧವನ್ನು ಹೊಸ ಅಧ್ಯಾಯ ಪ್ರಾರಂಭಿಸಬೇಕಾದ ಸಮಯ ಇದು ಎಂದು ಚೀನಾದ ರಾಯಭಾರಿ ಲುವಾ ಜೋಹುಯಿ ಹೇಳಿದ್ದಾರೆ. ಪೀಪಲ್ಸ್ ರಿಪಬ್ಲಿಕ್‌ ಆಫ್‌ ಚೀನಾದ 68ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಲುವಾ, ಭಾರತ ಹಾಗೂ ಚೀನಾ ತಮ್ಮ ಹಳೆಯ ಪುಟಗಳನ್ನು ಮಡಚಿ ಹೊಸ ಅಧ್ಯಾಯವನ್ನು ಪ್ರಾರಂಭಿಸಬೇಕಿದೆ.

ಇತ್ತೀಚೆಗೆ ನಡೆದ ಬ್ರಿಕ್ಸ್‌ ಸಮ್ಮೇಳನದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಹಾಗೂ ಪ್ರಧಾನಿ ಮೋದಿ ಪರಸ್ಪರ ಸಹಕಾರದ ಸಂದೇಶ ನೀಡಿದ್ದಾರೆ. ನಾವು ಜೊತೆಯಾಗಿ ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ.  ಒಂದು ಪ್ಲಸ್‌ ಒಂದು ಸೇರಿ ಹನ್ನೊಂದಾಗಬೇಕು. ಎರಡೂ ರಾಷ್ಟ್ರಗಳ ಮಧ್ಯೆ ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡಬೇಕು. ಉಭಯ ರಾಷ್ಟ್ರಗಳು ಹಳೆಯದನ್ನೆಲ್ಲ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದಿದ್ದಾರೆ.

 

Comments are closed.