ಮತ್ತೆ ಸುದ್ದಿಯಾದ ರಕ್ಷಿತಾ-ದರ್ಶನ್ : ಕ್ರೇಜಿ ಕ್ವೀನ್‌ ಕೋರಿಕೆಗೆ ಸ್ಪಂದಿಸಿದ ಕೆಂಚ : ಏನಿದು ಸ್ಟೋರಿ ?

ದರ್ಶನ್‌ -ರಕ್ಷಿತಾ ಜೋಡಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕಲಾಸಿಪಾಳ್ಯ , ಕೆಂಚದಂತಹ ಸಿನಿಮಾಗಳಲ್ಲಿ ನಟಿಸಿ ಸಖತ್‌ ಹಿಟ್ ಎನಿಸಿಕೊಂಡಿದ್ದರು. ಈ ಬಾರಿ ಅವರಿಬ್ಬರೂ ಸುದ್ದಿಯಲ್ಲಿರುವುದು ಸಿನಿಮಾದ ವಿಚಾರವಾಗಿ ಅಲ್ಲ. ಬದಲಿಗೆ, ಕಿರುತೆರೆಯಲ್ಲಿ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋನ ಸ್ಪರ್ಧಿಯಾಗಿರುವ ಚೆನ್ನಪ್ಪ, ದರ್ಶನ್‌ರ ದೊಡ್ಡ ಅಭಿಮಾನಿ.

 

ಅವರಿಗೆ ದರ್ಶನ್‌ರನ್ನು ನೋಡಬೇಕು ಎಂಬ ಕನಸಿತ್ತು. ಇದನ್ನು ಕೇಳಿದ ರಕ್ಷಿತಾ, ದರ್ಶನ್ ಅವರಲ್ಲಿ, ಚೆನ್ನಪ್ಪರನ್ನು ಭೇಟಿ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ದರ್ಶನ್, ರಕ್ಷಿತಾರ ಕೋರಿಕೆಯನ್ನು ಈಡೇರಿಸಿದ್ದು, ಚೆನ್ನಪ್ಪ ಅವರನ್ನು ಭೇಟಿಯಾಗಿದ್ದಾರೆ.

ಇದರಿಂದ ಚೆನ್ನಪ್ಪ ಫುಲ್ ಖುಷ್‌ ಆಗಿದ್ದು ರಕ್ಷಿತಾಗೆ ಧನ್ಯವಾದ ಹೇಳಿದ್ದಾರೆ.