ತೆರೆಗೆ ಬರಲಿದೆ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ : ನಿರ್ಮಾಣಕ್ಕೆ ಮುಂದಾದ viacom18

ಇತ್ತೀಚೆಗೆ ಎಮ್ ಎಸ್ ಧೋನಿ – ದಿ ಅನ್ಟೋಲ್ಡ್ ಸ್ಟೋರಿ, ಅಝರ್, ಸಚಿನ್ – ಎ ಬಿಲಿಯನ್ ಡ್ರೀಮ್ಸ್ ಹೀಗೆ ಸಾಲು ಸಾಲು ಕ್ರಿಕೆಟರ್ ಗಳ ಜೀವನ ಆಧಾರಿತ ಚಿತ್ರಗಳು ನಿರ್ಮಾಗೊಂಡಿವೆ. ನಿನ್ನೆಯಷ್ಟೆ ಭಾರತದ ಶ್ರೇಷ್ಟ ಆಲ್ರೌಂಡರ್ ಕಪಿಲ್ ದೇವ್ ಜೀವನವೂ ತೆರೆಗೆ ಬರಲಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತ್ತು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಟೀಮ್ ಇಂಡಿಯಾ ನಾಯಕಿ ಮಿಥಾಲಿ ರಾಜ್..

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಜೀವನ ಈಗ ಸಿನೆಮಾ ಆಗುತ್ತಿದೆ. ಮಿಥಾಲಿ ಜೀವನ ಆಧರಿಸಿದ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದಾಗಿ viacom18 ಮೋಷನ್ ಪಿಕ್ಚರ್ಸ್ ಮಂಗಳವಾರ, ಮಾಧ್ಯಮಗಳಿಗೆ ತಿಳಿಸಿದೆ. ಇದಕ್ಕೂ ಮೊದಲು viacom18 ಮೋಷನ್ ಪಿಕ್ಚರ್ಸ್  ಮೇರಿ ಕೊಮ್, ಭಾಗ್ ಮಿಲ್ಖಾ ಭಾಗ್, ದೃಶ್ಯಮ್, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಕ್ವೀನ್, ಮಾಂಝಿ – ದಿ ಮೌಂಟೇನ್ ಮ್ಯಾನ್ ಚಿತ್ರಗಳ ನಿರ್ಮಾಣ ಮಾಡಿದೆ.

‘ viacom18 ಮೋಷನ್ ಪಿಕ್ಚರ್ಸ್ ಈ ಸಿನೆಮಾ ಮಾಡುತ್ತಿರುವುದು ತುಂಬ ಸಂತೋಷವನ್ನುಂಟು ಮಾಡಿದೆ. ಈ ಚಿತ್ರದಿಂದ ಅನೇಕ ಯುವತಿಯರು ವೃತ್ತಿಪರ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ ‘ ಎಂದು ಮಿಥಾಲಿ ರಾಜ್ ಹೇಳಿದ್ದಾರೆ.

ಮಿಥಾಲಿ ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಂತ ಹೆಚ್ಚು ರನ್ ಬಾರಿಸಿದ ಆಟಗಾರ್ತಿಯಾಗಿದ್ದಾರೆ. 6000 ರನ್ ಪೂರೈಸಿದ ಏಕೈಕ ಮಹಿಳಾ ಕ್ರಿಕೆಟರ್ ಕೂಡ ಆಗಿದ್ದಾರೆ. ಸತತ 7 ಏಕದಿನ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಅವರದು. ಮಿಥಾಲಿ, ಅರ್ಜುನ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

viacom18 ಮೋಷನ್ ಪಿಕ್ಚರ್ಸ್ ನ ಸಿಓಓ ಅಜಿತ್ ಅಂಧಾರೆ, ‘ ಮುಂಚೆಯಿಂದಲೂ viacom18 ಕಹಾನಿ, ಮೇರಿ ಕೊಮ್, ಕ್ವೀನ್ ನಂತಹ ಬಲಿಷ್ಟ ಮಹಿಳಾ ಪಾತ್ರಗಳನ್ನು ಹೊಂದಿರುವ ಚಿತ್ರಗಳನ್ನು ನಿರ್ಮಿಸುತ್ತಾ ಬಂದಿದೆ ‘ ಎಂದು ಹೇಳಿದ್ದಾರೆ.

Comments are closed.

Social Media Auto Publish Powered By : XYZScripts.com