ವಕೀಲರನ್ನು ಭೇಟಿಯಾಗಲು ಬಂದಿದ್ದ ಹನಿಪ್ರೀತ್‌ : ಪೊಲೀಸರ ಕೈಗೆ ಸಿಗದೆ ಎಸ್ಕೇಪ್

ದೆಹಲಿ : ಅತ್ಯಾಚಾರ ಅಪರಾಧದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರು ಗುರ್ಮಿತ್‌ ರಾಂ ರಹೀಮ್‌ನ ದತ್ತು ಪುತ್ರಿ ಹನಿಪ್ರೀತ್‌ ದೆಹಲಿಯಲ್ಲಿ ತನ್ನ ವಕೀಲರಾದ ಪ್ರದೀಪ್‌ ಕುಮಾರ್‌ ಆರ್ಯರನ್ನು ಭೇಟಿಯಾಗಿ ಜಾಮೀನು ಅರ್ಜಿಗೆ ಸಹಿ ಹಾಕಿರುವುದಾಗಿ ಮೂಲಗಳು ತಿಳಿಸಿವೆ.

ಈ ಕುರಿತು ಆರ್ಯ ಹೇಳಿಕೆ ನೀಡಿದ್ದು, ಹನಿಪ್ರೀತ್‌, ಲಜಪತ್‌ ನಗರದ ನಮ್ಮ ಕಚೇರಿಗೆ ಬಂದಿದ್ದರು. ಜಾಮೀನು ಅರ್ಜಿಗೆ ಸಹಿ ಹಾಕಿ ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದಿದ್ದಾರೆ.

ಈ ಬೆನ್ನಲ್ಲೇ ಹರಿಯಾಣ ಪೊಲೀಸರು ಹನಿಪ್ರೀತ್‌ ಇನ್ಸಾನ್‌, ಡೇರಾ ಅನುಯಾಯಿಗಳಾದ ಆದಿತ್ಯ ಇನ್ಸಾನ್‌, ಪವನ್‌ ಇನ್ಸಾನ್‌ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿದ್ದಾರೆ. ಮಂಗಳವಾರ ಅರೆಸ್ಟ್‌ ವಾರೆಂಟ್‌ ಜೊತೆ ಪಂಚಕುಲಂನ ಪೊಲೀಸರು ದೆಹಲಿಯ ಹನಿಪ್ರೀತ್‌ ಮನೆ ಮೇಲೆ ದಾಳಿ ನಡೆಸಿದ್ದು, ಹನಿಪ್ರೀತ್‌ನನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆ.

 

Comments are closed.