ನರಗುಂದ ರಾಜ್ಯದ ಪ್ರಥಮ ‘ಬಹಿರ್ದೆಸೆ ಮುಕ್ತ ತಾಲೂಕು’ : ವೆಂಕಯ್ಯ ನಾಯ್ಡು ಘೋಷಣೆ

ಗದಗ ಜಿಲ್ಲೆಯ ನರಗುಂದ ತಾಲೂಕನ್ನು ಬಹಿರ್ದೆಸೆ ಮುಕ್ತಗೊಳಿಸುವ ಯೋಜನೆಯ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೊಣ್ಣೂರಿಗೆ ಆಗಮಿಸಿದ್ದಾರೆ. ನರಗುಂದ ತಾಲೂಕನ್ನು ರಾಜ್ಯದ ಪ್ರಥಮ ಬಹಿರ್ದೆಸೆ ಮುಕ್ತ ತಾಲೂಕನ್ನಾಗಿ ಘೋಷಣೆ ಮಾಡಲಾಯಿತು.

‘ ಬಯಲು ಬಹಿರ್ದೆಸೆ ಮುಕ್ತ ತಾಲೂಕು ಘೋಷಣೆಯಂತಹ ಕಾರ್ಯಕ್ರಮದ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ‘ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಕನ್ನಡದಲ್ಲಿ ಮಾತು ಆರಂಭಿಸಿ ಗಮನ ಸೆಳೆದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ‘ ಶೌಚಾಲಯ ಜಾಗೃತಿ ಯಾವುದೇ ಸರ್ಕಾರ ಹಾಗೇ ರಾಜಕೀಯ ಕಾರ್ಯಕ್ರಮವಾಗಬಾರದು. ನನಗೆ ಎಲ್ಲ ಪಕ್ಷ ಒಂದೇ. ಶೌಚಾಲಯಕ್ಕಾಗಿ ಸಮರ ಹಾಗೂ ಸ್ವಚ್ಛ ಭಾರತ ಶಬ್ದಗಳು ಬೇರೆಯಾದರೂ ಕೂಡ, ಉದ್ದೇಶ ಒಂದೇ ಆಗಿದೆ ‘ ಎಂದರು.

Comments are closed.