ಉಗ್ರರ ಪಾಲಿನ ಸ್ವರ್ಗವಾಗಿರುವ ರಾಷ್ಟ್ರಗಳನ್ನು ಸಹಿಸಲ್ಲ : ಭಾರತ-ಅಮೆರಿಕ ಜಂಟಿ ಹೇಳಿಕೆ

ದೆಹಲಿ : ಪಾಕ್‌ ವಿರುದ್ದ ಭಾರತಕ್ಕೆ ಬೆಂಬಲವಾಗಿ ಅಮೆರಿಕ ನಿಂತಿದ್ದು, ಉಗ್ರರ ಸ್ವರ್ಗವಾಗಿರುವ ರಾಷ್ಟ್ರಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಜಂಟಿ ಹೇಳಿಕೆ ನೀಡಿವೆ.

ಮಂಗಳವಾರ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಅಮೆರಿಕ ರಕ್ಷಣಾ ಸಚಿವ ಜೇಮ್ಸ್‌ ಮ್ಯಾಟಿಸ್‌ ದೆಹಲಿಯಲ್ಲಿ ಮಾತುಕತೆ ನಡೆಸಿದ್ದು, ಪಾಕಿಸ್ತಾನದ ವಿರುದ್ದ ಹರಿಹಾಯ್ದಿದ್ದಾರೆ.

ಉಗ್ರರ ಸುರಕ್ಷೆಗೆ ಕೆಲ ದೇಶಗಳು ಪ್ರೋತ್ಸಾಹ ನೀಡುತ್ತಿದ್ದು, ಇದನ್ನು ಅಮೆರಿಕ ಹಾಗೂ ಭಾರತ ಸಹಿಸುವುದಿಲ್ಲ ಎಂದು ಮ್ಯಾಟಿಸ್‌ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಫ್ಘಾನಿಸ್ತಾದ ಕುರಿತ ಅಮೆರಿಕದ ನೀತಿ, ಎರಡೂ ರಾಷ್ಟ್ರಗಳ ನಡುವೆ ರಕ್ಷಣಾ ಸಾಮಗ್ರಿಗಳ ಮಾರಾಟ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ.

 

Social Media Auto Publish Powered By : XYZScripts.com