ಅಗತ್ಯಬಿದ್ದರೆ ಬಿಜೆಪಿ ಜೊತೆ ಕೈಜೋಡಿಸಲು ಸಿದ್ಧ : ಕಮಲ್ ಹಾಸನ್‌

ಚೆನ್ನೈ : ಅಗತ್ಯಬಿದ್ದರೆ ಬಿಜೆಪಿ ಜೊತೆ ಕೈಜೋಡಿಸಲು ಸಿದ್ದ ಎಂದು ತಮಿಳಿನ ಖ್ಯಾತ ನಟ ಕಮಲ್‌ ಹಾಸನ್‌ ಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದರ ಸಂದರ್ಶನದ ವೇಳೆ ಮಾತನಾಡಿದ ಕಮಲ್‌ ಹಾಸನ್, ಒಮ್ಮೆ ರಾಜಕೀಯಕ್ಕೆ ಧುಮುಕಿದರೆ ನಟನೆಯನ್ನು ನಿಲ್ಲಿಸುತ್ತೇನೆ. ಆದರೆ ಚಿತ್ರರಂಗದೊಂದಿಗೆ ನನ್ನ ನಂಟನ್ನು ಕಳೆದುಕೊಳ್ಳುವುದಿಲ್ಲ. ನಟನೆ ಬಿಡುವುದು ನಿಜಕ್ಕೂ ನೋವಿನ ಸಂಗತಿ ಎಂದಿದ್ದಾರೆ.

ಜೊತೆಗೆ ನಾನು ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ. ಅಲ್ಲದೆ ಎಡಪಂಥೀಯವಾಗಿ ಯೋಚಿಸುತ್ತೇನೆ. ಆದರೆ ಜನರ ಅಭಿವೃದ್ಧಿಗಾಗಿ, ಜನರ ಸೇವೆಗಾಗಿ ಬಲಪಂಥೀಯ ಯೋಚನೆಗಳನ್ನು ಅಳವಡಿಸಿಕೊಳ್ಳಲು ಸದಾ ಸಿದ್ದನಾಗಿದ್ದೇನೆ ಎಂದಿದ್ದಾರೆ.
ಬಿಜೆಪಿ ಜನಪರ ಕೆಲಸ ಮಾಡುತ್ತಿದೆ ಎನಿಸಿದರೆ ಅದರ ಜೊತೆ ಕೈಜೋಡಿಸಲು ಸಿದ್ದ. ಆದರೆ ಬಿಜೆಪಿಯ ಗೋಹತ್ಯಾ ನಿಷೇಧದಂತಹ ಸರ್ಕಾರದ ನಿರ್ಧಾರಗಳನ್ನು ನಾನು ಒಪ್ಪುವುದಿಲ್ಲ. ನಾನೂ ಮೊದಲು ಗೋಮಾಂಸ ತಿನ್ನುತ್ತಿದ್ದೆ. ಆದರೆ ಈಗ ನಿಲ್ಲಿಸಿದ್ದೇನೆ. ನಾನು ನಿಲ್ಲಿಸಿದ್ದೇನೆ ಎಂದು ಬೇರೆಯವರಿಗೂ ತಿನ್ನಬೇಡಿ ಎನ್ನುವುದು ಸರಿಯಲ್ಲ ಎಂದಿದ್ದಾರೆ.

Social Media Auto Publish Powered By : XYZScripts.com