37ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಪ್ರಪಂಚದ ಅತೀ ಹೆಚ್ಚು ತೂಕದ ಮಹಿಳೆ ಎಮನ್

ದೆಹಲಿ : ಪ್ರಪಂಚದ ಅತೀ ತೂಕದ ಮಹಿಳೆ ಎಮನ್‌ ಅಹ್ಮದ್‌ ಸೋಮವಾರ ನಿಧನರಾಗಿದ್ದಾರೆ. ಮುಂಬೈನಲ್ಲಿ ತೂಕ ಇಳಿಸಿಕೊಳ್ಳುವ ಶಸ್ತ್ರಚಿಕಿತ್ಸ ಮಾಡಿಸಿಕೊಂಡಿದ್ದ ಎಮನ್‌, ಅಬುದಾಬಿಯಲ್ಲಿ ನಿಧನರಾಗಿದ್ದು ಅವರಿಗೆ 37 ವರ್ಷ ವಯಸ್ಸಾಗಿತ್ತು.

ಈ ಕುರಿತು ಬುರ್ಜೀಲ್‌ ಆಸ್ಪತ್ರೆಯ ವೈದ್ಯರು ಹೇಳಿಕೆ ನೀಡಿದ್ದು, ಒಮ್ಮೆ ಪ್ರಪಂಚದ ಅತೀ ಹೆಚ್ಚು ತೂಕದ ಮಹಿಳೆ ಎಂದು ಕರೆಸಿಕೊಂಡಿದ್ದ ಎಮನ್‌ಗೆ ಹೃದಯ ಸಂಬಂಧಿ ತೊಂದರೆ, ಮೂತ್ರಪಿಂಡ ಸಮಸ್ಯೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿದ್ದವು. ಅಲ್ಲದೆ ಶಸ್ತ್ರ ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಳ್ಳುತ್ತಿದ್ದು, ತಾವೇ ಎಲೆಕ್ಟ್ರಿಕ್ ಕುರ್ಚಿಯ ಸಹಾಯ ಪಡೆದು ಓಡಾಡುತ್ತಿದ್ದರು ಎಂದಿದ್ದಾರೆ.

ಎಮನ್‌ ಈಜಿಪ್ಟ್‌ ನಿವಾಸಿಯಾಗಿದ್ದು ಮುಂಬೈಗೆ ಬರುವ ವೇಳೆ504 ಕೆ.ಜಿ ಇದ್ದರು. ಬಳಿಕ ಮುಂಬೈನ ಸೈಫಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಬಳಿಕ 300ಕೆ.ಜಿಗೆ ಇಳಿದಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಬುದಾಬಿಗೆ ತೆರಳಿದ್ದರು. 20 ವೈದ್ಯರ ತಂಡ ಇವರಿಗೆ ಚಿಕಿತ್ಸೆ ನೀಡುತ್ತಿತ್ತು.

 

Comments are closed.

Social Media Auto Publish Powered By : XYZScripts.com