ಎಸ್‌. ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಬಳಿ 650 ಕೋಟಿ ದಾಖಲೆ ರಹಿತ ಹಣ ಪತ್ತೆ!

ಬೆಂಗಳೂರು :ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್‌ ಅವರ ಕಾಫಿ ಡೇ ಮೇಲೆ ಐಟಿ ಅಧಿಕಾರಿಗಳು ನಡೆಸಿರುವ ದಾಳಿಯ ವೇಳೆ 650 ಕೋಟಿಗೂ ಅಧಿಕ ಮೊತ್ತದ ಹಣ ಪತ್ತೆಯಾಗಿರುವುದಾಗಿ ಹೇಳಲಾಗಿದೆ.

ಸೆಪ್ಟಂಬರ್‌ 21ರಂದು ಸಿದ್ಧಾರ್ಥ್‌ ಅವರ ಕಾಫಿ ಡೇ ಸೇರಿದಂತೆ ಅನೇಕ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಮಹತ್ವದ ದಾಖಲೆ ಪತ್ರಗಳು ಲಭ್ಯವಾಗಿದ್ದು, 650ಕೋಟಿ ಮೊತ್ತದ ಹಣ ಸಹ ಪತ್ತೆಯಾಗಿದೆ. ಇನ್ನೂ ಹೆಚ್ಚು ಮೊತ್ತದ ಹಣ ಸಿಗುವ  ಸಾಧ್ಯತೆ ಇರುವುದಾಗಿ ಐಟಿ ಅಧಿಕಾರಿಗಳು ಹೇಳಲಾಗುತ್ತಿದೆ. ಅಲ್ಲದೆ ಕಾನೂನಿನ ಚೌಕಟ್ಟು ಮೀರಿರುವ ಬಗ್ಗೆಯೂ ಮಾಹಿತಿ ದಾಖಲಾಗಿದೆ.