ಸ್ಮೋಕಿಂಗ್ ಮಾಡಿ ಟೀಕೆಗೆ ಗುರಿಯಾದ ಮಾಹಿರಾ ಖಾನ್ : ಪಾಕ್ ನಟಿಯ ಬೆಂಬಲಕ್ಕೆ ರಣಬೀರ್

ಕೆಲವು ದಿನಗಳ ಹಿಂದೆ ಪಾಕಿಸ್ತಾನದ ನಟಿ ಮಾಹಿರಾ ಖಾನ್, ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆ ನ್ಯೂಯಾರ್ಕಿನಲ್ಲಿ ಕಾಣಿಸಿಕೊಂಡಿದ್ದರು. ಇವರಿಬ್ಬರೂ ಜೊತೆಯಾಗಿ ನ್ಯೂಯಾರ್ಕಿನ ಬೀದಿಗಳಲ್ಲಿ ನಿಂತು ಸ್ಮೋಕ್ ಮಾಡಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ನಂತರ ಮಾಹಿರಾ ವಿರುದ್ಧ ಟ್ವಿಟರಿನಲ್ಲಿ ಅಪಾರ ಟೀಕೆ ವ್ಯಕ್ತವಾಗಿತ್ತು. ಆಕೆಯ ಶಾರ್ಟ್ ಡ್ರೆಸ್ ಹಾಗೂ ಸ್ಮೋಕಿಂಗ್ ಮಾಡುತ್ತಿರುವುದನ್ನು ಹಲವರು ವಿರೋಧಿಸಿದ್ದರು.

ಈ ವಿಷಯದ ಬಗ್ಗೆ ತಮ್ಮ ಮೌನವನ್ನು ಮುರಿದಿರುವ ರಣಬೀರ್ ‘ ನಾನು ಮಾಹಿರಾ ಖಾನ್ ಅವರನ್ನು ಕೆಲವು ತಿಂಗಳಿಂದ ಬಲ್ಲೆ. ನನಗೆ ಆಕೆಯ ಸಾಧನೆಯ ಬಗ್ಗೆ ಮೆಚ್ಚುಗೆಯಿದೆ ಹಾಗೂ ಆಕೆಯ ವ್ಯಕ್ತಿತ್ವವನ್ನು ತುಂಬ ಗೌರವಿಸುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ಅವಳ ಬಗ್ಗೆ ಕೇಳಿ ಬರುತ್ತಿರುವ ಟೀಕೆ ಮಾತುಗಳು ಅನ್ಯಾಯದಂತೆ ಕಾಣಿಸುತ್ತಿದೆ. ಒಬ್ಬ ಹೆಣ್ಣು ಎಂಬ ಒಂದೇ ಕಾರಣಕ್ಕಾಗಿ ಆಕೆಯನ್ನು ಈ ರೀತಿ ಟೀಕೆಗೆ ಗುರಿಯಾಗಿಸುವುದು ಸರಿಯಲ್ಲ. ಇಂತಹ ನಕಾರಾತ್ಮಕತೆಯನ್ನು ನಿಲ್ಲಿಸಿ, ನಿಮ್ಮ ನಿಮ್ಮ ಜೀವನದ ಬಗ್ಗೆ ಲಕ್ಷ್ಯವಹಿಸಿ. ಸ್ಮೋಕಿಂಗ್ ಹಾಗೂ ದ್ವೇಷ ಎರಡೂ ಆರೋಗ್ಯಕ್ಕೆ ಹಾನಿಕರ ‘ ಎಂದು ರಣಬೀರ್ ಟೀಕೆ ಮಾಡುವವರಿಗೆ ಬುದ್ಧಿವಾದ ಹೇಳಿದ್ದಾರೆ.

ರಣಬೀರ್ ಕಪೂರ್ ಅವರನ್ನು ಹೊರತು ಪಡಿಸಿ, ಬಾಲಿವುಡ್ ನ ಅಲಿ ಜಫರ್, ಪರಿಣೀತಿ ಚೋಪ್ರಾ, ವರುಣ್ ಧವನ್ ಮುಂತಾದವರು ಕೂಡ ಮಾಹಿರಾಳನ್ನು ಬೆಂಬಲಿಸಿದ್ದಾರೆ.

ಪರಿಣೀತಿ ಚೋಪ್ರಾ ‘ ಇದು ತುಂಬ ಅನ್ಯಾಯ. ಇಂತಹ ಟೀಕೆಯ ಮಾತುಗಳ ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತು. ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಚಿಕ್ಕ ಸಂಗತಿಗಳೂ ದೊಡ್ಡ ಸುದ್ದಿಯಾಗಿಬಿಡುತ್ತವೆ ‘ ಎಂದಿದ್ದಾರೆ.

ನಟ ವರುಣ್ ಧವನ್ ‘ ಆಕೆಯನ್ನು ಅವಮಾನಿಸುತ್ತಿರುವವರಿಗೆ ನಾಚಿಕೆಯಾಗಬೇಕು ‘ ಎಂದಿದ್ದಾರೆ.

ಅಲಿ ಜಫರ್ ‘ ಪುರುಷರಿಗೆ ಇರುವಂತೆ ಪ್ರತಿಯೊಬ್ಬ ಮಹಿಳೆಗೂ ಜೀವನದಲ್ಲಿ ತನಗೆ ಬೇಕಾದದ್ದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವಿರುತ್ತದೆ ‘ ಎಂದಿದ್ದಾರೆ.

ಪಾಕಿಸ್ತಾನದ ಕೆಲ ನಟ ನಟಿಯರೂ ಮಾಹಿರಾ ಸಮರ್ಥಿಸಿ ಟ್ವೀಟ್ ಮಾಡಿದ್ದಾರೆ. ಪುರುಷರು ಸ್ಮೋಕ್ ಮಾಡುವಾಗ ಸುಮ್ಮನಿರುವ ನಾವು ಮಹಿಳೆ ಸ್ಮೋಕ್ ಮಾಡಿದಾಗ ಯಾಕೆ ಹೀಗೆ ವಿರೋಧಿಸುತ್ತೇವೆ..? ಎಂದು ಒಸ್ಮಾನ್ ಖಾಲಿದ್ ಭಟ್ ಪ್ರಶ್ನಿಸಿದ್ದಾರೆ.

ಮಾಹಿರಾ, ಕಿಂಗ್ ಖಾನ್ ಶಾರುಖ್ ಅಭಿನಯದ ‘ರಯೀಸ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು.

Comments are closed.