ಪಕ್ಷಕ್ಕಿಂತ ದೇಶಕ್ಕೆ ಮೊದಲ ಪ್ರಾಧಾನ್ಯತೆ ನೀಡಿ : ಬಿಜೆಪಿ ಕಾರ್ಯಕರ್ತರಿಗೆ ಮೋದಿ ಕರೆ

ದೆಹಲಿ : ದೇಶಕ್ಕೆ ಮೊದಲ ಪ್ರಾಧಾನ್ಯತೆ ನೀಡಿ. ಪಕ್ಷಕ್ಕೆ ನಂತರ ಎಂದು ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಮೋದಿ, ಭ್ರಷ್ಟಾಚಾರದ ವಿರುದ್ಧದ ನಮ್ಮ ನಿಲುವನ್ನು ಬದಲಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದ ಜನತೆಗೆ ಸಹಾಯವಾಗುವಂತಹ ರಾಜಕಾರಣ ಮಾಡಬೇಕು. ನಾವು ಬಿಜೆಪಿಯನ್ನು ಎಲ್ಲಕ್ಕಿಂತ ಮುಂದೆ ತೆಗೆದುಕೊಂಡು ಹೋಗಬೇಕು. ಅದಕ್ಕಿಂತ ಪ್ರಾಮುಖ್ಯತೆಯನ್ನು ದೇಶಕ್ಕೆ ನೀಡಬೇಕು. ದೇಶ ಮೊದಲು ನಂತರ ಪಕ್ಷ ಎಂಬ ಭಾವ ನಮ್ಮಲ್ಲಿ ಬೆಳೆಯಬೇಕು ಎಂದಿದ್ದಾರೆ.

ಭಯೋತ್ಪಾದನೆ ಹಾಗೂ ಭ್ರಷ್ಟಾಚಾರದ ವಿರುದ್ಧದ ನಮ್ಮ ಸಮರ ಮುಂದುವರಿಯುತ್ತದೆ. ದೇಶದಲ್ಲಿ ಬಿಜೆಪಿ ಬಿಟ್ಟರೆ ಮತ್ಯಾವ ಪಕ್ಷವೂ ಇಷ್ಟೊಂದು ಚಟುವಟಿಕೆಯಿಂದಿಲ್ಲ ಎಂದಿದ್ದಾರೆ. ಇದೇ ವೇಳೆ ಅಕ್ಟೋಬರ್‌ 31ರಂದು ರನ್‌ ಫಾರ್‌ ಯುನಿಟಿ ಜಾಥಾ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ವಿತ್ತ ಸಚಿವ ಜೇಟ್ಲಿ,  ಕೆಲ ತಿಂಗಳಿನಿಂದ ಜಿಡಿಪಿ ಇಳಿಮುಖವಾಗಿದೆ. ಇದಕ್ಕೆ ಬಂಡವಾಳ ಹೂಡಿಕೆ ಕಡಿಮೆಯಾಗಿರುವುದು ಹಾಗೂ ಉತ್ಪಾದನೆ ಕುಂಠಿತವಾಗಿರುವುದೇ ಕಾರಣ. ಮುಂದಿನ ಚುನಾವಣೆಯಲ್ಲಿ ನಮ್ಮ ಗೆಲುವು ಖಚಿತ. ನಮ್ಮ ಅಧಿಕಾರಾವಧಿಯಲ್ಲೇ ನವ ಭಾರತ ನಿರ್ಮಾಣವಾಗಬೇಕು ಎಂದಿದ್ದಾರೆ.

 

Comments are closed.