ಬ್ಲೂವೇಲ್‌ ಸೂಸೈಡ್‌ ಗೇಮ್‌ : ಭಾರತಕ್ಕೆ ಸಹಾಯ ಹಸ್ತ ಚಾಚಿದ ರಷ್ಯಾ

ಮದುರೈ : ದೇಶದ ಮಕ್ಕಳನ್ನು ಬಲಿಪಡೆಯುತ್ತಿರುವ ಬ್ಲೂವೇಲ್‌ ಗೇಮನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ರಷ್ಯಾ ಭಾರತಕ್ಕೆ ಸಹಾಯ ಹಸ್ತ ಚಾಚಿದೆ ಎಂದು ಮಧುರೈನಲ್ಲಿರುವ ರಷ್ಯಾ ರಾಯಭಾರಿ ಕಚೇರಿ ಹೇಳಿದೆ.

 

ಈ ಕುರಿತು ರಾಯಭಾರ ಕಚೇರಿಯ ಮೈಕೆಲ್‌ ಜೆ. ಗೊಬರ್ಟೋ ಈ ಬಗ್ಗೆ ವರದಿಯೊಂದನ್ನು ಮದ್ರಾಸ್‌ ಹೈಕೋರ್ಟ್‌ಗೆ ನೀಡಿದ್ದು ರಷ್ಯಾ ಸರ್ಕಾರ ಬ್ಲೂವೇಲ್‌ ಗೇಮ್‌ ನಿಯಂತ್ರಣ ಮಾಡಲು ಭಾರತಕ್ಕೆ ಸಹಾಯ ಮಾಡಲು ಇಚ್ಛಿಸಿದೆ ಎಂದಿದ್ದಾರೆ.

 

ರಷ್ಯಾದಲ್ಲಿ ಸಾವಿರಾರು ಮಕ್ಕಳು ಬ್ಲೂವೇಲ್‌ ಗೇಮ್‌ ಆಡಿದ್ದರೂ ಬ್ಲೂವೇಲ್‌ ಚಟಕ್ಕೆ ಬಲಿಯಾದವರ ಸಂಖ್ಯೆ ಕೇವಲ 8. ಅಲ್ಲದೆ ಬ್ಲೂವೇಲ್‌ ಗೇಮ್‌ ಆಡುವಂತೆ ಪ್ರಚೋದಿಸಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಆತನಿಗೆ 3 ವರ್ಷ ಶಿಕ್ಷೆ ವಿಧಿಸಲಾಗಿದೆ. ಆದರೆ ಭಾರತದಲ್ಲಿ ಸಾವಿಗೀಡಾದವರ ಸಂಖ್ಯೆ ಹೆಚ್ಚಿರುವುದಾಗಿ ಹೇಳಲಾಗಿದೆ ಎಂದು ಮೈಕೆಲ್‌ ಹೇಳಿದ್ದಾರೆ.

 

Comments are closed.