ಮೂರು ವರ್ಷ ಪೂರೈಸಿದ ಮೋದಿಯ ಮನ್‌ ಕಿ ಬಾತ್‌ : ಈ ಬಾರಿ ಹೀರೋ ಆದ ದಲಾಲ್‌

ದೆಹಲಿ : ಪ್ರಧಾನಿ ಮೋದಿ ಅವರ ಮನ್‌ ಕಿ ಬಾತ್‌ ಕಾರ್ಯಕ್ರಮ ಮೂರನೇ ವರ್ಷ ಪೂರೈಸಿದ್ದು, ಮನ್‌ ಕಿ ಬಾತ್‌ ಸರಣಿಯ 36ನೇ ಆವೃತ್ತಿಯಲ್ಲಿ ಮೋದಿ ಮಾತನಾಡಿದ್ದಾರೆ. ದೇಶ ಅಭಿವೃದ್ಧಿಯತ್ತ ಸಾಗಬೇಕಾದರೆ ಅದಕ್ಕೆ ಯುವಕರು ಮನಸ್ಸು ಮಾಡಬೇಕು. ಅಭಿವೃದ್ದಿ ಎಂದರೆ ಸ್ವಚ್ಛತೆ. ಆದ್ದರಿಂದ ನಮ್ಮ ದೇಶ ಸ್ವಚ್ಛತೆಯತ್ತ ಸಾಗಬೇಕಿದೆ  ಎಂದಿದ್ದಾರೆ.

ಅಕ್ಟೋಬರ್‌ 2ರಂದು ಮಹಾತ್ಮಾ ಗಾಂಧೀಜಿ ಅವರ ಜನ್ಮದಿನಕ್ಕೂ ಮುನ್ನ ಸ್ವಚ್ಛತಾ ಹೀ ಸೇವಾ ಆಂದೋಲನ ನಡೆಯಲಿದ್ದು, ಇದಕ್ಕೆ ರಾಷ್ಟ್ರಪತಿ ಕೋವಿಂದ್‌ ಚಾಲನೆ ನೀಡಲಿದ್ದಾರೆ. ಈಗಾಗಲೆ ಈ ಆಂದೋಲನಕ್ಕೆ ಉತ್ತರ ಪ್ರತಿಕ್ರಿಯೆ ದೊರೆತಿದೆ ಎಂದಿದ್ದಾರೆ.

ಇದೇ ವೇಳೆ 12 ಸಾವಿರ ಕೆ.ಜಿ ಕಸವನ್ನು ಸ್ವಚ್ಛಗೊಳಿಸಿದ 18 ವರ್ಷದ ಶ್ರೀನಗರದ ಹುಡುಗ ಬಿಲಾಲ್‌ ದಾರ್‌ ನಿಜಕ್ಕೂ ನಮ್ಮ ಹೆಮ್ಮೆ. ಈತ ದಾಲ್‌ ಸರೋವರದಲ್ಲಿ 12 ಸಾವಿರ ಕೆ.ಜಿ ಕಸವನ್ನು ಕ್ಲೀನ್‌ ಮಾಡಿದ್ದಾನೆ. ಶ್ರೀನಗರ ಮುನ್ಸಿಪಲ್‌ ಇಲಾಖೆ ಈತನನ್ನು ಸ್ವಚ್ಛತಾ ಅಭಿಯಾನದ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ಈತ ಇಡೀ ದೇಶಕ್ಕೆ ಮಾದರಿ ಎಂದಿದ್ದಾರೆ.

ಸ್ವಚ್ಛತಾ ಆಂದೋಲನ ವಿಷಯ ಬಂದರೆ ಶ್ರೀನಗರದ ಬಿಲಾಲ್‌ ದಾರ್‌ ನಿಜಕ್ಕೂ ಹೆಮ್ಮಯ ವ್ಯಕ್ತಿ ಎನಿಸುತ್ತಾರೆ. ಹದಿನಂಟು ವರ್ಷದ ಈ ಯುವಕ ಶ್ರೀನಗರದ ದಾಲ್‌ ಸರೋವರದಲ್ಲಿ 12 ಸಾವಿರ ಕೆಜಿ ಕಸವನ್ನು ಕ್ಲೀನ್‌ ಮಾಡಿದ್ದಾನೆ. ಶ್ರೀನಗರದ ಮುನ್ಸಿಪಲ್‌ ನಿಗಮ ಈತನನ್ನು ಸ್ವಚ್ಛತಾ ಆಂದೋಲನದ ರಾಯಭಾರಿಯನ್ನಾಗಿಯೂ ಮಾಡಿದೆ. ಬಿಲಾಲ್‌ ದಾರ್‌ ಇಡೀ ದೇಶಕ್ಕೆ ಮಾದರಿಯಾಗಿದ್ದಾನೆ ಎಂದು ಮೋದಿ ತಿಳಿ

ಇದೇ ವೇಳೆ ಅಕ್ಟೋಬರ್‌ ವಿಶೇಷವಾದ ತಿಂಗಳಾಗಿದೆ. ಗಾಂಧೀಜಿಯಂತಹ ಪುಣ್ಯ ಪುರುಷ ಹುಟ್ಟಿದ ತಿಂಗಳು ಅದು. ಈ ವೇಳೆ ನಾವೆಲ್ಲರು ಖಾದಿ ಬಟ್ಟೆಗಳ ಖರೀದಿಗೆ ಉತ್ತೇಜನ ನೀಡೋಣ. ಆದ್ದರಿಂದ ಎಲ್ಲರೂ ಖಾದಿ ಬಟ್ಟೆ ಖರೀದಿಸಿ ಎಂದು ಕರೆ ನೀಡಿದ್ದಾರೆ.

ಇದೇ ವೇಳೆ ಮನ್‌ ಕಿ ಬಾತ್‌ 3 ವರ್ಷ ಪೂರೈಸಿದೆ. ಜನರಿಂದ ಸಾಕಷ್ಟು ಫೀಡ್‌ ಬ್ಯಾಕ್‌ ಸಹ ಬಂದಿದೆ. ಮನ್‌ ಕಿ ಬಾತ್‌ ದೇಶದ ಜನತೆಯ ಜೊತೆ ಸಂಪರ್ಕ ಕಲ್ಪಿಸಲು ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ ದೇಶದ ಶಕ್ತಿ ಏನು ಎಂಬುದನ್ನು ತಿಳಿಸಲು ಸಹಾಯವಾಗಿದೆ. ಮನ್‌ ಕಿ ಬಾತ್‌ ಕಾರ್ಯಕ್ರಮವನ್ನು ರಾಜಕೀಯದಿಂದ ದೂರವಿಟ್ಟಿದ್ದೇನೆ.

 

 

Comments are closed.

Social Media Auto Publish Powered By : XYZScripts.com