ಶನಿ ದೇವರಿಗೆ ಹೆದರಿ ಬೆಚ್ಚಿಬಿದ್ದನಾ ಕಳ್ಳ.? : ಕದಿಯೋದು ಬಿಟ್ಟು ಮಾಡಿದ್ದೇನು ?

ಮೈಸೂರು : ಶನಿದೇವರ ದೇವಸ್ಥಾನದಲ್ಲಿ ಕಳ್ಳತನ ಮಾಡಲು ನುಗ್ಗಿದ ಕಳ್ಳ, ದೇವಸ್ಥಾನದ ಬಾಗಿಲು ಒಡೆದು ದೇವಾಲಯ ಪ್ರವೇಶಿಸಿದ್ದು, ನಂತರ ಗಾಬರಿಯಿಂದ ಬರಿಗೈನಲ್ಲಿ ದೇವಸ್ಥಾನದಿಂದ ಹೊರಬಂದಿರುವ ಘಟನೆ ಮೈಸೂರಿನ ದಟ್ಟಗಳ್ಳಿ ಬಡಾವಣೆಯಲ್ಲಿ ನಡೆದಿದೆ.

 

ದೇವಾಲಯದಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳ ಯಾರೂ ಇಲ್ಲದ ವೇಳೆ ನೋಡಿಕೊಂಡು ದೇವಸ್ಥಾನದ ಒಳಗೆ ನುಗ್ಗಿದ್ದಾನೆ. ಬಳಿಕ ಏನೂ ಕಳ್ಳತನ ಮಾಡದೆ ಗಾಬರಿಯಿಂದ ಬರಿಗೈಲಿ ವಾಪಸ್ಸಾಗಿದ್ದಾನೆ. ಈ ಬಗ್ಗೆ ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದು, ಕಳ್ಳನಿಗಾಗಿ ಶೋಧಕಾರ್ಯ ಮುಂದುವರಿದಿದೆ.

 

Comments are closed.