ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಂಬರ್-1 ಸುಳ್ಳುಗಾರ : ಸಿಎಂ ಸಿದ್ದರಾಮಯ್ಯ

ಗದಗ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಂಬರ್-1 ಸುಳ್ಳುಗಾರ. ಬಿಎಸ್ವೈ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಒಮ್ಮೆಯೂ ಸತ್ಯ ನುಡಿದಿಲ್ಲ ಎಂದು ಗದಗದಲ್ಲಿ ಬಿ.ಎಸ್. ಯಡಿಯೂರಪ್ಪ ವಿರುದ್ಧ  ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಕ್ಷೇತ್ರವಿಲ್ಲದ ಕಾರಣ ಬಿಎಸ್ವೈ ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದಾರೆ. ಶಿಕಾರಿಪುರ ಕ್ಷೇತ್ರವನ್ನು ತಮ್ಮ ಮಗನಿಗೆ ಉಳಿಸುವುದಕ್ಕಾಗಿ ಬಿಎಸ್ವೈ ಉತ್ತರದತ್ತ ಸ್ಪರ್ಧಿಸೋ ಇರಾದೆ ಹೊಂದಿದ್ದಾರೆ. ಉತ್ತರ ಕರ್ನಾಟದಲ್ಲಿ ಸ್ಪರ್ಧಿಸುವಂತೆ ಅಭಿಮಾನದಿಂದ ಸಾಕಷ್ಟು ಜಿಲ್ಲೆಯ ಜನರು ನನಗೂ ಒತ್ತಾಯಿಸುತ್ತಿದ್ದಾರೆ. ನನಗೆ ನನ್ನದೇಯಾದ ಕ್ಷೇತ್ರವಿದೆ. ಸದ್ಯ ಯಡಿಯೂರಪ್ಪ ಸ್ಪರ್ಧೆಗೆ ಯಾವ ಕ್ಷೇತ್ರವಿದೆ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ನೋಟು ಅಮಾನಿಕರಣ ಯಶಸ್ವಿಯಾಗಿಲ್ಲ. ಕಪ್ಪು ಹಣ ಬರ್ಲಿಲ್ಲ, ಭಯೋತ್ಪಾದನೆ ನಿಂತಿಲ್ಲ ಮೋದಿ ಸರ್ಕಾರ ಏನು ಮಾಡಿದೆ ಹೇಳಿ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Comments are closed.