ಎಲ್ಲ ಪಕ್ಷಗಳು ಸೇರಿ ಭಾರತವನ್ನು ಪ್ರಜಾಪ್ರಭುತ್ವ ಮುಕ್ತ ಮಾಡುತ್ತಿವೆ : ದೇವನೂರು ಮಹದೇವ

ಮಂಡ್ಯ : ಮಂಡ್ಯ ಜಿಲ್ಲೆಯ ಪಾಂಡವಪುರ ಅಖಿಲ ಭಾರತ ರೈತ ಸಂಘಟನೆಗಳ ಸಮನ್ವಯ ಸಮಿತಿ ಸಮಾವೇಶದಲ್ಲಿ ಸಾಹಿತಿ ದೇವನೂರು ಮಹದೇವ ಹೇಳಿಕೆ ನೀಡಿದ್ದಾರೆ. ಪಾಂಡವಪುರದಲ್ಲಿ ಸಾಹಿತಿ ದೇವನೂರ ಮಹದೇವ ಮಾತನಾಡಿ ‘ ರಾಜಕೀಯ ಪಕ್ಷಗಳ ರೀತಿ, ರಿವಾಜು ನೋಡಿದರೆ ದಿಗಿಲಾಗುತ್ತೆ. ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಬಂಡವಾಳ ಅಭಿವೃದ್ಧಿ ಮಾಡುತ್ತಿದೆ. ಬಿಜೆಪಿ ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತಿದೆ. ಕಾಂಗ್ರೆಸ್ ಬಿಜೆಪಿ ಮುಕ್ತ ಮಾಡ್ತೀವಿ ಅಂತಿದೆ. ಇದು ಮಾದರಿ ರಾಜಕಾರಣವಂತೆ.

Image result for devanuru mahadeva

ಜೆಡಿಎಸ್ ಗೋಸುಂಬೆ (ಓತಿ ಕ್ಯಾತ) ಥರ. ಮರದ ಮೇಲೆ ಕುಳಿತು ಯಾವ ಕಡೆ ಹಾರಲಿ ಅಂತಾ ಹೊಂಚಾಕ್ತಿದೆ. ಇವರಲ್ಲಿ ಯಾರು ಯಾರನ್ನ ಧ್ವಂಸ ಮಾಡ್ತಿದ್ದಾರೆ. ಇವರೆಲ್ಲಾ ಸೇರಿ ಪ್ರಜಾಪ್ರಭುತ್ವವನ್ನೇ ಮುಕ್ತ ಮಾಡ್ತಿದ್ದಾರೆ. ಅಧಿಕಾರ ದಾಹಕ್ಕೆ ಸಿಲುಕಿ ಕುರುಡಾಗಿದ್ದಾರೆ. ಅವಕ್ಕೆ ಏನೂ ಕಾಣ್ತಿಲ್ಲ. ರೈತಾಪಿ ವರ್ಗ ಕುಗ್ಗಿ ಕುಸಿತಿದೆ. ಭಾರತವನ್ನ ನಿರುದ್ಯೋಗ ಕಿತ್ತು ತಿನ್ನುತ್ತಿದೆ. ವಂಚನೆಯ ಸಾಮ್ರಾಜ್ಯಕ್ಕೆ ನಾವು ಬಲಿಯಾಗ್ತಿದ್ದೇವೆ ‘ ಎಂದು ಹೇಳಿದ್ದಾರೆ.

Comments are closed.

Social Media Auto Publish Powered By : XYZScripts.com