ಬೆಂಗಳೂರು : ಚಿನ್ನಸ್ವಾಮಿಯಲ್ಲಿ 4ನೇ ಏಕದಿನ ಪಂದ್ಯ : ಟಿಕೆಟ್ ಪಡೆಯಲು ಇಲ್ಲಿದೆ ವಿವರ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಏಕದಿನ ಸರಣಿಯ 4ನೇ ಪಂದ್ಯ ಸೆಪ್ಟೆಂಬರ್ 28 ರಂದು ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಹಗಲು/ರಾತ್ರಿ ಪಂದ್ಯವಾಗಿದ್ದು ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ. ಸ್ಟೇಡಿಯಮ್ ನಲ್ಲಿ ಕುಳಿತು ನೆಚ್ಚಿನ ಆಟಗಾರರ ಆಟವನ್ನು ಲೈವ್ ಆಗಿ ನೋಡುವ ಆಸೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯಲ್ಲೂ ಇರುತ್ತದೆ. ಹಾಗಾಗಿ ಇಂಡಿಯಾ – ಆಸ್ಟ್ರೇಲಿಯಾ ತಂಡಗಳ ನಡುವಿನ 4ನೇ ಏಕದಿನ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಲು ಬಯಸುವವರಿಗಾಗಿ ಟಿಕೆಟ್ ಪಡೆಯುವ ಕುರಿತು ಮಾಹಿತಿ ಇಲ್ಲಿದೆ.

Related image

ದಿನಾಂಕ ಸೆಪ್ಟೆಂಬರ್ 26 ರಂದು ಬೆಳಿಗ್ಗೆ 9.30 ರಿಂದ 6 ಗಂಟೆಯವರೆಗೆ ಟಿಕೆಟ್ ಮಾರಾಟ ನಡೆಯಲಿದೆ. 600 ರೂಗಳಿಂದ, 6000 ರೂ ಮೌಲ್ಯದ ಟಿಕೆಟ್ ಲಭ್ಯವಿರುತ್ತವೆ. ಆನ್ಲೈನ್ ನಲ್ಲಿ ಆಸನ ಕಾಯ್ದಿರಿಸಿದವರಿಗೆ 2017 ಸೆಪ್ಟೆಂಬರ್ 25, 26, 27, 28 ಈ ನಾಲ್ಕು ದಿನ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ. 4 ರಲ್ಲಿ 10.30 ರಿಂದ ಟಿಕೆಟ್ ನೀಡಲಾಗುವುದು. ಯಾವ ಗ್ಯಾಲರಿಯಲ್ಲಿ ಎಷ್ಟು ಬೆಲೆಯ ಟಿಕೆಟ್ ಲಭ್ಯ ಎಂಬ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.

Comments are closed.

Social Media Auto Publish Powered By : XYZScripts.com