ಯುಪಿಯನ್ನ ಕ್ಲೀನ್​ ಸ್ವೀಪ್ ಮಾಡಿದ ಮೇಲೆ 2 ದಿನ ವಾರಣಾಸಿಯಲ್ಲಿ ಮೋದಿ

ವಾರಣಾಸಿಯಲ್ಲಿ ಪ್ರದಾನಿ ನರೇಂದ್ರ ಮೋದಿಯ ಎರಡು ದಿನಗಳ ಪ್ರವಾಸ. ಉತ್ತರ ಪ್ರದೇಶದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ಮೋದಿ ಹಲವು ಕಾರ್ಯಕ್ರಮಗಳಿಗೆ ಈ ಎರಡು ದಿನಗಳಲ್ಲಿ ಚಾಲನೆ ನೀಡಿದ್ದಾರೆ

ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಚುನಾಯಿತ ಕ್ಷೇತ್ರ ವಾರಣಾಸಿಗೆ ಇಂದು ಭೇಟಿ ನೀಡಿದ್ದಾರೆ. ಎರಡು ದಿನಗಳ ಕಾಲ ವಾರಣಾಸಿಯಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ದಿನವಾದ ಇಂದು ದೀನ್​ದಯಾಳ್ ಹಸ್ತಕಲ ಸಂಕುಲ್​ದ ಉದ್ಘಾಟನೆ ಮಾಡಿದ್ದಾರೆ. 274 ಕೋಟಿಯಲ್ಲಿ ನಿರ್ಮಾಣವಾಗಿರೋ ಉದ್ಯಮ ಕುಶಲಕರ್ಮಿಗಳಿಗೆ ಅನುಕೂಲವಾಗಿದೆ.

ಇದ್ರೊಂದಿಗೆ ಬನರಸ್ ವಡೋದರ ಮಹಾಮನ ಎಕ್ಸ್​​ಪ್ರೆಸ್ ರೈಲನ್ನು ಲೋಕಾರ್ಪಣೆ ಮಾಡಿದ್ರು. ಈ ಸಂದರ್ಭದಲ್ಲಿ ರೈಲ್ವೇ ಮಂತ್ರಿ ಪಿಯೂಶ್ ಗೋಯರ್ ಉಪಸ್ಥಿತರಿದ್ದರು. ಇದ್ರೊಂದಿಗೆ ವಾರಣಾಸಿಯಲ್ಲಿ ರಾಮಾಯಣದ ಸ್ಟ್ಯಾಂಪ್​ ಅನ್ನೂ ಉದ್ಘಾಟಿಸಿದ್ರು. ಹಾಗೇ 17 ವಿವಿಧ ಕಾರ್ಯಕ್ರಮಗಳಿಗೆ ಮೋದಿ ಈ ಎರಡು ದಿನಗಳಲ್ಲಿ ಚಾಲನೆ ನೀಡಲಿದ್ದಾರೆ.

 

ವಿಕಾಸ ಅವರ ಮೊದಲ ಆದ್ಯತೆ ಎಂಬುದನ್ನು ಕಾಶಿ ಜನರಿಗೆ ಸಾರಲಿರುವ ಮೋದಿ ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿ ಈ ಗೋ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಶುಕ್ರವಾರ ಮಧ್ಯಾಹ್ನ 1 ಗಂಟೆ 25 ನಿಮಿಷಕ್ಕೆ ಮೋದಿ ದೆಹಲಿ ವಿಮಾನ ನಿಲ್ದಾಣದಿಂದ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದ ಪ್ರಧಾನಿ ರಾತ್ರಿ 8 ಗಂಟೆ ಹೊತ್ತಿಗೆ ದುರ್ಗಾ ಪೂಜೆ ಸಲ್ಲಿಸಿ ಪಕ್ಷದ ಕಾರ್ಯಕರ್ತರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.

 

Comments are closed.

Social Media Auto Publish Powered By : XYZScripts.com