ಹ್ಯಾಟ್ರಿಕ್ ಬಾಲ್ ಎಸೆಯುವ ಮುನ್ನ ಕುಲದೀಪ್ ಗೆ ಧೋನಿ ಭಾಯ್ ಹೇಳಿದ್ದೇನು..?

ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 50 ರನ್ ಜಯಗಳಿಸಿತು. ಈ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದು ಅರ್ಧಶತಕ ಬಾರಿಸಿದ ಅಜಿಂಕ್ಯ ರಹಾನೆ ಹಾಗೂ ನಾಯಕ ವಿರಾಟ್ ಕೊಹ್ಲಿ. ಅದರ ಜೊತೆಗೆ ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ ಆರಂಭಿಕ ಆಘಾತ ನೀಡಿದರೆ ಎಡಗೈ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಪಡೆದು ಕಾಂಗರೂ ಪಡೆಯ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು.

Image result for dhoni kuldeep yadav hat trick wickets

ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಭಾರತದ ಪರವಾಗಿ ಈ ಮೊದಲು ಹ್ಯಾಟ್ರಿಕ್ ಸಾಧನೆಯನ್ನು ಮಾಡಿದವರು ಕಪಿಲ್ ದೇವ್ ಹಾಗೂ ಚೇತನ್ ಶರ್ಮಾ. ಈ ಪಟ್ಟಿಗೆ ಹೊಸ ಸೇರ್ಪಡೆ ಕುಲದೀಪ್ ಯಾದವ್. ಗುರುವಾರ ನಡೆದ ಪಂದ್ಯದಲ್ಲಿ ಯಾದವ್ ಆಸ್ಟ್ರೇಲಿಯಾ ಇನ್ನಿಂಗ್ಸ್ ನ 33ನೇ ಓವರಿನಲ್ಲಿ ಈ ಸಾಧನೆ ಮಾಡಿದರು. ಮೊದಲ ಎಸೆತದಲ್ಲಿ ಮ್ಯಾಥ್ಯೂ ವೇಡ್ ರನ್ನು ಕ್ಲೀನ್ ಬೋಲ್ಡ್ ಮಾಡಿ ವಿಕೆಟ್ ಪಡೆದರೆ ಎರಡನೇ ಎಸೆತದಲ್ಲಿ ಆ್ಯಷ್ಟನ್ ಆ್ಯಗರ್ ಅವರನ್ನು ಎಲ್ ಬಿ ಡಬ್ಲ್ಯೂ ಬಲೆಗೆ ಬೀಳಿಸಿ ಎರಡನೇ ವಿಕೆಟ್ ಪಡೆದರು.

Image result for dhoni kuldeep yadav hat trick wickets

ಮ್ಯಾಚ್ ನಂತರ ತಮ್ಮ ಅನುಭವವನ್ನು ಹಂಚಿಕೊಂಡಿರುವ ಯಾದವ್, ‘ ಹ್ಯಾಟ್ರಿಕ್ ಬಾಲ್ ಎಸೆಯುವ ಮುನ್ನ, ನಾನು ಧೋನಿ ಭಾಯ್ ಗೆ ಯಾವ ರೀತಿ ಬಾಲ್ ಮಾಡಲಿ ಎಂದು ಸಲಹೆ ಕೇಳಿದೆ. ಅದಕ್ಕೆ ಮಾಹಿ ಭಾಯ್ ‘ ತುಝೆ ಜೈಸಾ ಭಿ ಲಗ್ತಾ ಹೈ ವೋಹ್ ಡಾಲ್ ‘ ( ನಿನಗೆ ಹೇಗೆ ಸರಿ ಅನಿಸುತ್ತದೆಯೋ ಹಾಗೇಯೇ ಬಾಲ್ ಮಾಡು ) ಎಂದು ಹೇಳಿದರು,  ಅವರ ಈ ಮಾತು ಇದು ನನಗೆ ಆತ್ಮವಿಶ್ವಾಸ ಮೂಡಿಸಿತು ‘ ಎಂದಿದ್ದಾರೆ. ಮೂರನೆಯ ಎಸೆತ ಪ್ಯಾಟ್ರಿಕ್ ಕಮಿನ್ಸ್ ಅವರಿಗೆ ಎಸೆದಾಗ, ಚೆಮಡು ಕಮಿನ್ಸ್ ಬ್ಯಾಟ್ ಸವರಿಕೊಂಡು ಧೋನಿ ಗ್ಲೌಸ್ ಭದ್ರವಾಗಿ ಸೇರಿತು. ಈ ಮೂಲಕ ಸತತ ಮೂರು ಬಾಲ್ಗಳಲ್ಲಿ 3 ವಿಕೆಟ್ ಪಡೆದ ಯಾದವ್, ಹ್ಯಾಟ್ರಿಕ್ ಸಾಧನೆ ಮಾಡಿದ ಮೂರನೇ ಭಾರತೀಯ ಎನಿಸಿಕೊಂಡಿದ್ದಾರೆ.

Comments are closed.

Social Media Auto Publish Powered By : XYZScripts.com