ಸಿ.ಎಂ. ಸೀದಾ ಐದನೇ ಕ್ಲಾಸ್ ಗೆ ಹೋಗಿ LLB ಮಾಡಿದ್ದು : ಹೆಚ್. ಆಂಜನೇಯ

ಚಿತ್ರದುರ್ಗ : ಸರ್ಕಾರಿ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಆಂಜನೇಯ ಸಿ.ಎಂ ಕುರಿತು ಮಕ್ಕಳಿಗೆ ಪಾಠ ಮಾಡಿದ್ದಾರೆ. ಸಿದ್ದರಾಮಯ್ಯನವರು ಬುದ್ಧಿವಂತ ಹುಡುಗನಾಗಿದ್ದ ಕಾರಣ ಶಾಲೆಯಲ್ಲಿ ಆತನಿಗೆ ನೇರ ಐದನೇ ತರಗತಿಗೆ ದಾಖಲು ಮಾಡಿಕೊಂಡಿದ್ದರು ಎಂದು ಹೇಳಿದರು.

ಪ್ರತಿಭಾ ಕಾರಂಜಿ‌ ಕಾರ್ಯಕ್ರಮದಲ್ಲಿ ಮಕ್ಕಳಿಗೆ‌ ಸಿಎಂ ಸಿದ್ದರಾಮಯ್ಯ ಕುರಿತು ಪಾಠ ಮಾಡಿದ‌ ಆಂಜನೇಯ “ಮಕ್ಕಳೇ ಸಿದ್ದರಾಮಯ್ಯ ಯಾರು ಗೊತ್ತಾ, ಅವರು ಓದಿದ್ದು ಹೇಗೆ ಗೊತ್ತಾ.? ಅವರು ಒಂದು, ಎರಡು, ಮೂರು, ನಾಲ್ಕು ಓದಲೇ ಇಲ್ಲ. ಡೈರಕ್ಟ್ ಐದನೇ ಕ್ಲಾಸಿಗೆ ಹೋಗಿ ಬಿಎಸ್ಸಿ, ಎಲ್ ಎಲ್ ಬಿ ಮಾಡಿ ಈಗ‌ ಮುಖ್ಯಮಂತ್ರಿ ಆಗಿದ್ದಾರೆ. ನಿಮ್ಮಲ್ಲಿ ಯಾರಾದರು ಮುಖ್ಯಮಂತ್ರಿಯಾಗಿ, ಹಾಗಂತ ಐದನೇ ತರಗತಿಗೆ ನೇರವಾಗಿ ಸೇರಬೇಡಿ. ಒಂದನೇ ಕ್ಲಾಸಿಂದ ಶಾಲೆಗೆ ಹೋಗಿ. ಮತ್ತೆ ದನ ಕಾಯೋಕೊ ಹೋದಿರಿ ಹುಷಾರು” ಎಂದು ಸಿ.ಎಂ ಕುರಿತು ನೀತಿ ಪಾಠ ಹೇಳಿದ್ದಾರೆ.

Comments are closed.