ಕಾಶ್ಮೀರ ವಿಚಾರ ಕುರಿತಂತೆ ಪಾಕ್‌ಗೆ ಬುದ್ದಿ ಮಾತು ಹೇಳಿದ ಚೀನಾ?!!

ಬೀಜಿಂಗ್‌ : ಇಷ್ಟು ದಿನ ಪಾಕ್‌ ಪರವಾಗಿದ್ದ  ಚೀನಾ ಇದ್ದಕ್ಕಿದ್ದಂತೆ ಭಾರತದ ಪರ ವಹಿಸಿಕೊಂಡು ಮಾತನಾಡತೊಡಗಿದೆ. ಕಾಶ್ಮೀರ ವಿಷಯ ಕುರಿತು ಪಾಕಿಸ್ತಾನಕ್ಕೆ ಬುದ್ದಿವಾದ ಹೇಳಿರುವ ಚೀನಾ, ಭಾರತದೊಂದಿಗೆ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದೆ.

ಈ ಕುರಿತು ಮಾತನಾಡಿರುವ ಚೀನಾ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ಲು ಕಂಗ್‌, ಕಾಶ್ಮೀರ ವಿಷಯವನ್ನು ಭಾರತದ ಜೊತೆಗೂಡಿ ಶಾಂತಿಯುತವಾಗಿ ಪರಿಹರಿಸಿಕೊಳ್ಳಿ. ಇತ್ತೀಚಿಗಿನ ವರದಿಗಳನ್ನು ಚೀನಾ ಗಮನಿಸುತ್ತಿದೆ. ಕಾಶ್ಮೀರ ವಿಷಯದಲ್ಲಿ ಚೀನಾದ ನಿಲುವು ದೃಢವಾಗಿದೆ. ಈ ವಿವಾದಕ್ಕೆ ಇತಿಹಾಸವೇ ಇದೆ. ಮಾತುಕತೆಯ ಮೂಲಕ ಎರಡೂ ರಾಷ್ಟ್ರಗಳು ಸಮಸ್ಯೆಯನ್ನು ಬಗೆಹರಿಸಿಕೊಂಡು ಆಂತರಿಕ ಶಾಂತಿ ಹಾಗೂ ಭದ್ರತೆ ಕಾಪಾಡಿಕೊಳ್ಳಲಿ ಎಂದಿದ್ದಾರೆ. ಈ ವಿಷಯದಲ್ಲಿ ಕಾಶ್ಮೀರ ಪಾಕಿಸ್ತಾನ ಶಾಂತಿಯಿಂದ ವರ್ತಿಸುವಂತೆ ಬುದ್ದಿವಾದ ಹೇಳಿದ್ದಾರೆ.

Comments are closed.

Social Media Auto Publish Powered By : XYZScripts.com