ಅಭಿವೃದ್ದಿ ಪದದ ಅರ್ಥ ಗೊತ್ತೇನ್ರೀ ಮೋದಿಜೀ ? : ಸಿಎಂ ಸಿದ್ದರಾಮಯ್ಯ

ಬಳ್ಳಾರಿ : ಡಿಕೆ ಸುರೇಶ್‌ ಮತ್ತು ಪಕ್ಷದ ಮಧ್ಯೆ ಭಿನ್ನಾಭಿಪ್ರಾಯವಿಲ್ಲ. ಬಿಬಿಎಂಪಿ ಚುನಾವಣೆ ವಿಷಯದಲ್ಲಿ ತಮ್ಮ ಕ್ಷೇತ್ರದವರನ್ನು ಪರಿಗಣಿಸುವಂತೆ ಡಿಕೆ ಸುರೇಶ್ ಕೇಳಿದ್ದಾರಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮೋಡ‌ಬಿತ್ತನೆ ಕೆಲವೆಡೆ ಫಲಕಾರಿಯಾಗಿದೆ ಎಂದಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಅಭಿವೃದ್ಧಿ ಅಂದರೆ ಏನು? ಒಂದು ಫ್ಲೈಟ್ ಬಿಟ್ಟರೆ ಅಭಿವೃದ್ಧಿ ಆಗುತ್ತಾ. ಬಾಂಬೆ‌ಮಿಠಾಯಿ ಕತೆ ಹೇಳುವ ಪ್ರಧಾನಿ… ಬಡವರಿಗೆ ಏನು ಸಹಾಯ ಮಾಡಿದ್ದಾರೆ. ಅಭಿವೃದ್ಧಿ ಪದದ ಅರ್ಥ ಗೊತ್ತೇನ್ರಿ. ಇವೆಲ್ಲ ಬೂಟಾಟಿಕೆ. ಕೇಂದ್ರದ ಬಗ್ಗೆ ಮಾತಾಡಬೇಡ ಬಿಡ್ರಿಎಂದಿದ್ದಾರೆ.

Comments are closed.

Social Media Auto Publish Powered By : XYZScripts.com