ದೇಶದ ಜಿಡಿಪಿ ಹಾಳುಮಾಡಿದ್ದೇ ಮೋದಿಯ ವಿಕಾಸ್ : ಸಂತೋಷ್ ಲಾಡ್ 

ಬಳ್ಳಾರಿ: ವಿಮಾನ ಯಾನ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಪಕ್ಷದ ಮತ್ತು ಚುನಾವಣೆ ಕುರಿತು ಕೇಂದ್ರ ಸಚಿವ ಜಯಂತ್ ಸಿನ್ಹಾ ಮಾತಿಗೆ  ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಕ್ಷೇಪಿಸಿದ್ದಾರೆ.

ಇಂದು ನಡೆದಿದ್ದು ಎರಡು ಸರಕಾರಗಳ ಕಾರ್ಯಕ್ರಮ ಹೀಗಿರುವಾಗ ಸರಕಾರದ ಕಾರ್ಯಕ್ರಮಗಳ ಅಭಿವೃದ್ಧಿ ಬಗ್ಗೆ ಹೇಳಲಿ ಅದು ಬಿಟ್ಟು ಪಕ್ಷದ ವಿಚಾರ ಮಾತನಾಡಿದ್ದು ಸರಿಯಲ್ಲವೆಂದು ಸಮಾರಂಭದ ನಂತರ ಸುದ್ದಿಗಾರರಿಗೆ ಹೇಳಿದರು.

ಕಳೆದ 70 ವರ್ಷಗಳಿಂದ ದೇಶದಲ್ಲಿ ಏನೂ ಆಗಿಲ್ಲ ಎನ್ನುತ್ತಾರೆ. ನಮ್ಮ ಯುಪಿಎ ಮತ್ತು ಕಾಂಗ್ರೆಸ್ ಸರಕಾರ ಜಾರಿಗೆ ತಂದ ಆಧಾರ್. ಆರ್ ಟಿಐ. ಜಿಎಸ್ ಟಿ. ಆಹಾರ ಭದ್ರತೆ, ಆರ್ ಟಿ ಇ. ದೂರ ಸಂಪರ್ಕ ಕ್ರಾಂತಿ ಎಲ್ಲವನ್ನು ನಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ.

ದಿನಕ್ಕೆ ಒಂದುವರೆ ಕೋಟಿ ವೆಚ್ಚಮಾಡಿ ಪ್ರಚಾರ ಮಾಡುಕೊಳ್ಳುವ ನಾಟಕ ಬಿಟ್ಟು, ಜಿಡಿಪಿ ಕುಸಿದು ಬಿದ್ದು ದೇಶ ಆರ್ಥಿಕ ಮುಗ್ಗಟಿಗೆ ತಲುಪಿದೆ. ಇದನ್ನು ಅವರದೇ ಪಕ್ಷದ ರಾಜ್ಯ ಸಭಾ ಸದಸ್ಯ ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ. ಬರೀ ಸಬ್ ಕಾ ಸಾಥ್‌ ಸಬ್‌ ಕಾ ವಿಕಾಸ್ ಎಂಬುದನ್ನು ಬಿಟ್ಟು ದೇಶಕ್ಕಾಗಿ ಏನಾದರು ಮಾಡಲಿ ಎಂದಿದ್ದಾರೆ.

Comments are closed.

Social Media Auto Publish Powered By : XYZScripts.com