ಶಾಲೆಯಲ್ಲಿ ಶಿಕ್ಷೆ ನೀಡಿದ್ದಕ್ಕೆ ಮನನೊಂದು 5ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ..!

ಉತ್ತರ ಪ್ರದೇಶದ ಗೋರಖ್ ಪುರದಲ್ಲಿ, ಶಾಲೆಯಲ್ಲಿ ಶಿಕ್ಷಕರು ಶಿಕ್ಷೆ ನೀಡಿದ ಕಾರಣಕ್ಕೆ ಮನನೊಂದು 5 ನೇ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೇಂಟ್ ಆ್ಯಂಥೋನಿ ಕಾನ್ವೆಂಟ್ ನಲ್ಲಿ 5 ನೇ ತರಗತಿ ಓದುತ್ತಿದ್ದ 11 ವರ್ಷದ ನವನೀತ್ ಪ್ರಕಾಶ್, ಟೀಚರ್ ಶಿಕ್ಷಿಸಿದ್ದಕ್ಕಾಗಿ ತೀವ್ರ ಮನನೊಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷಯ ತಿಳಿದ ಮನೆಯವರು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಸೆಪ್ಟೆಂಬರ್ 15 ರಂದು ಶಾಲೆಯಲ್ಲಿ ನಡೆಯುತ್ತಿದ್ದ ಪರೀಕ್ಷೆಯಿಂದ ಮನೆಗೆ ಬಂದ ನಂತರ ನವನೀತ್ ತೀವ್ರ ಹತಾಶೆಯಲ್ಲಿದ್ದ. ನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

 

Image result for poison consumption

ಸಾಯುವ ಮುನ್ನ ಬಾಲಕ ಸೂಸೈಡ್ ನೋಟ್ ಕೂಡ ಬರೆದಿಟ್ಟಿದ್ದಾನೆ. ಅದರಲ್ಲಿ ‘ ಟೀಚರ್ ತನಗೆ ಸತತ 3 ಪೀರಿಯಡ್ ಗಳ ವರೆಗೆ ಬೆಂಚ್ ಮೇಲೆ ನಿಲ್ಲುವಂತೆ ಶಿಕ್ಷೆ ನೀಡಿ, ತುಂಬ ಕೆಟ್ಟದಾಗಿ ವರ್ತಿಸಿದ್ದರು. ಇನ್ನು ಮುಂದೆ ಯಾರಿಗೂ ಇಷ್ಟು ಕಠಿಣ ಶಿಕ್ಷೆಯನ್ನು ನೀಡಬೇಡಿ ‘ ಎಂದು ನವನೀತ್ ವಿನಂತಿಸಿಕೊಂಡಿದ್ದಾನೆ.

ಶಾಲೆಯಲ್ಲಿ ನವನೀತ್ ನಿಗೆ ತುಂಬ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಪಾಲಕರು ಆರೋಪಿಸಿದ್ದಾರೆ. ಆ ಶಿಕ್ಷಕನ ಬಗ್ಗೆ ಶಾಲೆಯ ಆಡಳಿತ ಮಂಡಳಿಗೆ ದುರನ್ನೂ ಸಹ ಬಾಲಕನ ಪೋಷಕರು ನೀಡಿದ್ದರು. ಶಿಕ್ಷೆ ನೀಡಿದ ಶಿಕ್ಷಕನ ವಿರುದ್ಧ ಪೋಲೀಸ್ ದೂರನ್ನೂ ಸಹ ತಂದೆ ತಾಯಿ ದಾಖಲಿಸಿದ್ದಾರೆ. ಶಾಲೆಯ ಆಢಲಿತ ಮಂಡಳಿ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಬೇಕಿದೆ.