50 ಇದ್ದಾಗ 50, 80 ಆದಾಗ 80, 100 ಆದರೆ ನಮ್ಮ ಗತಿಯೇನು ?

ಸಾಮಾನ್ಯವಾಗಿ ರಾಜಕಾರಣಕ್ಕೆ ಇಳಿದ ಮೇಲೆ ಎಲ್ಲಾ ರಾಜಕಾರಣಿಗಳು ದಪ್ಪವಾಗುತ್ತಾರೆ. ಹಣ ಲೂಟಿ ಮಾಡಿ ಈ ರೀತಿ ಆಗಿದ್ದಾರೆ ಎಂಬ ಮಾತು ಕೇಳಿಬರುವುದು ಸಾಮಾನ್ಯ. ಆದರೆ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬ ಕೇಂದ್ರ ಸಚಿವೆ ಸ್ಮೃತಿ ಇರಾನಿಯ ಫೋಟೋ ಹಾಕಿದ್ದು, ಆ ಫೋಟೋ ಭಾರೀ ವೈರಲ್‌ ಆಗಿದೆ. ಸ್ಮೃತಿ ಇರಾನಿ 50 ಕೆ.ಜಿ ಇದ್ದಾಗ ಪೆಟ್ರೋಲ್‌ ಬೆಲೆ 50ರೂ ಇತ್ತು. ಈಗ ಸ್ಮೃತಿ ಇರಾನಿ 80ಕೆ.ಜಿ ಆಗಿದ್ದಾರೆ. ಅದೇ ರೀತಿ ಪೆಟ್ರೋಲ್‌ ಬೆಲೆ ಸಹ 80 ರೂ ಆಗಿದೆ. ಇನ್ನು ಅವರು 100 ಕೆಜಿ ದಾಟಿದರೆ ನಮ್ಮ ಗತಿಯೇನು ಎಂದು ಟ್ರೋಲ್‌ ಮಾಡಿದ್ದಾರೆ.

ಜೊತೆಗೆ ದೇಶದ ಆರ್ಥಿಕತೆ ಕುಸಿಯುತ್ತಿರುವುದಕ್ಕೆ ಮೋದಿ ಅವರೇ ಕಾರಣ ಎಂದು ವ್ಯಂಗ್ಯವಾಡಿದ್ದು, ಕಾಂಗ್ರೆಸ್‌ ಅಧಿಕಾರವಧಿಯಲ್ಲಿದ್ದ ಪೆಟ್ರೋಲ್‌, ಡೀಸೆಲ್‌ ಬೆಲೆಗಿಂತ ಬಿಜೆಪಿಯ ಅಧಿಕಾರಾವಧಿಯಲ್ಲಿ ಎಲ್ಲವೂ ಏರಿಕೆಯಾಗಿದೆ. ಜಿಡಿಪಿ ಮಾತ್ರ ಇಳಿಕೆಯಾಗಿದೆ. ಮೋದಿ ದೇಶಕ್ಕಾಗಿ ಮಾಡುತ್ತಿರುವುದೇ ಇದೇನಾ ಎಂದು ಪ್ರಶ್ನಿಸಿದ್ದಾರೆ.

Comments are closed.