ಮುಂದಿನ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ಮಹದಾಯಿಯೇ ಅಸ್ತ್ರ..?

ಮಹದಾಯಿ. ಈ ನದಿ ಉತ್ತರ ಕರ್ನಾಟಕದ ಜನರನ್ನು ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆ.  ಈ ನದಿಯ ನೀರಿಗಾಗಿ ವರ್ಷಗಟ್ಟಲೆ ತಪಸ್ಸಿನ ರೀತಿ ಪ್ರತಿಭಟನೆ ಮಾಡಿದ್ರೂ ಸಹ ಪ್ರಯೋಜನ ಮಾತ್ರ ಏನೂ ಆಗಿಲ್ಲ.
ಈ ವರ್ಷ ಸಮಸ್ಯೆ ಬಗೆ ಹರಿಯುತ್ತದೆ ಮುಂದಿನ ವರ್ಷ ಬಗೆಹರಿಯುತ್ತದೆ. ಕೇಂದ್ರ ಸರ್ಕಾರದಲ್ಲಿ ಪಕ್ಷ ಬದಲಾವಣೆ ಅದ್ರೆ ಬಗೆಹರಿಯುತ್ತೆ ಎಂಬ ನಂಬಿಕೆಗಳೆಲ್ಲಾ ಸುಳ್ಳಾಗಿವೆ. ಈಗ ಈ ವಿಷಯವನ್ನೇ ರಾಜಕೀಯ ದಾಳವಾಗಿ ಬಳಸಿಕೊಳ್ಳಲು ರಾಜ್ಯದ ಮೂರು ಪಕ್ಷಗಳು ಸಿದ್ಧತೆ ನಡೆಸಿವೆ.
 ಮುಂದಿನ ವರ್ಷ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗದ್ದುಗೆ ಏರಲು ಎಲ್ಲ ಪಕ್ಷಗಳು ತೆರೆ ಮರೆಯ ಕಸರತ್ತನ್ನು ಈಗಿನಿಂದಲೇ ಆರಂಭಿಸಿದ್ದು, ಮಹಾದಾಯಿ ವಿಷಯವನ್ನು ಇಟ್ಟುಕೊಂಡು ಬೇಳೆ ಬೇಯಿಸಿಕೊಳ್ಳಲು ಮೂರು ಪಕ್ಷಗಳು  ಪ್ಲಾನ್ ಮಾಡಿಕೊಂಡಿದೆ.
ಇನ್ನು ರಾಜ್ಯ ಬಿಜೆಪಿ ನಾಯಕರು ಗೋವಾ ಸಿಎಂ ಜೊತೆ ಮಾತುಕತೆಗೆ ಮುಂದಾಗಿದ್ದರು. ಆದ್ರೆ ಈಗ ಇವರ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿಕೊಂಡಂತೆ ಆಗಿದೆ. ಮಹಾರಾಷ್ಟ್ರದಲ್ಲಿ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಶೀತಲ ಸಮರ ಆಂರಭವಾಗಿದೆ. ಅಲ್ಲದೆ ಬಿಜೆಪಿ ನಿಲುವಿನ ವಿರುದ್ಧ ಮಾಹಾರಾಷ್ಟ್ರ ಕಾಂಗ್ರೆಸ್ ಹೋರಾಟಕ್ಕೆ ಅಣಿಯಾಗಿದೆ. ಬಿಜೆಪಿ ನಡೆಯನ್ನೇ ಅಸ್ತ್ರ ಮಾಡಿಕೊಂಡಿರೋ, ಕಾಂಗ್ರೆಸ್ ಪ್ರತಿಭಟನೆಗೆ ರೂಪು ರೇಷೆ ಸಿದ್ಧ ಪಡಿಸಿಕೊಂಡಿದೆ. ಈ ಹೋರಾಟದ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಕೇಂದ್ರ ನಾಯಕರಿಗೆ ಪ್ರಸಕ್ತ ವರದಿ ನೀಡಿದೆ.
ಮಹಾದಾಯಿ ವಿಷಯಕ್ಕೆ ಸಂಬಂಧ ಪಟ್ಟಂತೆ ಇದೆ ತಿಂಗಳು ಮೊದಲ ವಾರದಲ್ಲಿ ಕರ್ನಾಟಕ ಬಿಜೆಪಿ ನಾಯಕರು ಮಾತುಕತೆಗೆ ತೆರಳಬೇಕಿತ್ತು. ಆದರೆ ರಾಜ್ಯ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮಣೆ ಹಾಕಿದೆ.
ಇನ್ನು ಈ ವಿಷಯ ಮೂರು ರಾಜ್ಯದ ಬಿಜೆಪಿ ನಾಯಕರಿಗೆ ನುಂಗಲಾರದ ಬಿಸಿ ತುಪ್ಪದಂತೆ ಪರಿಣಮಿಸುತ್ತಿದೆ. ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಮಹಾದಾಯಿ ಬಗ್ಗೆ ನಿಲುವನ್ನು ತೆಗೆದುಕೊಂಡಲ್ಲಿ ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಲಿದೆ. ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆ ಕರ್ನಾಟಕದಲ್ಲಿ ಪಕ್ಷಕ್ಕೆ ಬಾರಿ ಹೊಡೆತ ಬೀಳುವುದು ಗ್ಯಾರೆಂಟಿ…..

Comments are closed.

Social Media Auto Publish Powered By : XYZScripts.com