ಕೇಳಿದ್ದನ್ನು ಕೊಡುವ “ಕಲಿಯುಗದ ಪಾಂಡುರಂಗ” ಅಲಿಯಾಸ್ ಮಹಾದೇವಪ್ಪ..!

ಕೊಪ್ಪಳ : ಮಹಾದೇವಪ್ಪ ಎಂಬ ಹೆಸರಿನ ವ್ಯಕ್ತಿಯೋರ್ವ ‘ನನ್ನ ಕಾಲುಗಳಲ್ಲಿ ತ್ರಿಶೂಲಗಳಿವೆ, ನಾನು ಸಾಕ್ಷಾತ್ ಪಾಂಡುರಂಗ’ ಎಂದು ಹೇಳಿಕೊಂಡು ಜನರ ಕಣ್ಣಿಗೆ ಮಂಕು ಬಳಿಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೊದಲು ಎಲ್ಲರಂತೆ ನಾನು ಸಾಮಾನ್ಯನಾಗಿದ್ದೇ, ಪಂಡರಾಪೂರಕ್ಕೆ ಹೋಗಿ ಈ ವಿದ್ಯೆ ಕಲಿತು ಬಂದಿದ್ದೇನೆ ಎಂದು ಹೇಳುಕೊಂಡಿದ್ದಾನೆ. ಕಳೆದ 15 ವರ್ಷಗಳಿಂದ ಈ ಕಾರ್ಯ ಮಾಡುತ್ತ ಬಂದಿರುವ ಈತ, ‘ಇದುವರೆಗೂ ನಾನು ಹೇಳಿದ ಮಾತುಗಳು ಸುಳ್ಳಾಗಿಲ್ಲ’ ಎಂದು ಬಡಾಯಿಕೊಚ್ಚುಕೊಳ್ಳುತ್ತಿದ್ದು, ರಾಯಲ್ ಎನ್ ಫಿಲ್ಡ್  ಬೈಕ್ ನಲ್ಲೆ ಊರೂರು ಅಲೆಯುತ್ತ ಅಮಾಯಕ ಜನರನ್ನು ವಂಚಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಮಕ್ಕಳಾಗದವರಿಗೆ ಮಕ್ಕಳು ಕೊಡುತ್ತೇನೆ. ನಿಮ್ಮಲ್ಲಿ ಏನೆ ಸಮಸ್ಯೆ ಇರಲಿ ನಾನು ಪರಿಹಾರ ಮಾಡಿಕೊಡುತ್ತೇನೆಂದು ಹೇಳಿಕೊಂಡು ಜನರನ್ನು ವಂಚಿಸುವುದು ಈತನ ವೃತ್ತಿಯಾಗಿಬಿಟ್ಟಿದೆ. ಬೆಳಗಾವಿ ಜಿಲ್ಲೆಯ ರಾಯಭಾಗದ ಕೊಪ್ಪಳ ತಾಲೂಕಿನ ಯತ್ನಟ್ಟಿ ಗ್ರಾಮ ಹೊರವಲಯದ ಜಮೀನಿನಲ್ಲಿ ನೆಲೆಸಿಕೊಂಡು ಕಳೆದ ಎರಡು-ಮೂರು ದಿನಗಳಿಂದ ದೇವರ ಹೆಸರಿನಲ್ಲಿ ಇಲ್ಲಿನ ಅಮಾಯಕ ಜನರನ್ನು ವಂಚಿಸುತ್ತಿದ್ದಾನೆ. ಈ ಬಗ್ಗೆ ಸ್ಥಳಿಯರಿಂದ  ಮಾಹಿತಿ ಬಂದ ಕೂಡಲೆ ಮಾಧ್ಯಮದವರು  ಸ್ಥಳಕ್ಕೆ ಧಾವಿಸಿ ನೋಡಿದಾಗ, ಈ ವ್ಯಕ್ತಿ ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.

ಮಹಿಳೆಯರು ಮಕ್ಕಳು ಎಂದು ಲೆಕ್ಕಿಸದೇ ಬಾಯಿಗೆ ಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ, ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾನೆ. ಕೇವಲ ಎರಡು ಮೂರು ದಿನದಲ್ಲಿ ಇಲ್ಲಿ ವಾಸಮಾಡಿಕೊಂಡು ನಾಲ್ಕೈದು ದೇವರ ಫೋಟೊಗಳು ಇಟ್ಟುಕೊಂಡು ತಾನೇ ದೇವಮಾನವನಂತೆ ಫೋಸು ಕೊಡುತ್ತ ಜನರನ್ನು ಯಾಮಾರಿಸುತ್ತ ಬಂದಿದ್ದಾನೆ. ಆಂಧ್ರಾ-ಮಹಾರಾಷ್ಟ್ರಾ ಭಾಗಗಳಲ್ಲಿ ನೂರಾರು ಮಕ್ಕಳನ್ನ ದಯಪಾಲಿಸಿದ್ದೇನೆ ಎಂದು ಹೇಳಿಕೊಳ್ಳುವ ಮಹಾದೇವಪ್ಪ, ಅನೇಕ ರಾಜಕಾರಣಿಗಳು ನನ್ನ ಬಳಿ ಬಂದು ಹೋಗಿದ್ದಾರೆ, ಸಂಸದ ಶ್ರೀರಾಮಲು ಕೂಡ ನನ್ನ ಬಳಿಬಂದು ಹೋಗಿದ್ದರು ಎಂದು ಹೇಳಿಕೆ ನೀಡಿದ್ದಾನೆ.

 

Comments are closed.