ದೇಶದ ಆರ್ಥಿಕತೆ ಸಂಪೂರ್ಣ ಕುಸಿತ ಕಾಣುತ್ತಿದೆ : ಸುಬ್ರಮಣಿಯನ್ ಸ್ವಾಮಿ

ದೆಹಲಿ : ದೇಶದ ಆರ್ಥಿಕತೆ ಸಂಪೂರ್ ಕುಸಿತ ಕಾಣುತ್ತಿದ್ದು ಅದನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅದು ಸಂಪೂರ್ಣ ಕುಸಿತ ಕಂಡು ದೇಶದ ಪರಿಸ್ಥಿತಿ ಅಸ್ತವ್ಯಸ್ತವಾಗಬಹುದು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌  ಸ್ವಾಮಿ ಹೇಳಿದ್ದಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ಈ ಕುರಿತು ಮೋದಿ ಅವರಿಗೆ ಪತ್ರ ಬರೆದಿದ್ದೆ. ಇಂದು ನಮ್ಮ ಆರ್ಥಿಕತೆ ಹಿಂದಕ್ಕೆ ಗಿರಕಿ ಹೊಡೆಯುತ್ತಿದೆ. ಇದನ್ನು ಸುಸ್ಥಿರಗೊಳಿಸಲು ಇಂದೂ ಸಾಧ್ಯವಿದೆ. ಆದರೆ ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಬಹುದು ಎಂದಿದ್ದಾರೆ.

ಜನರೆದುರು ಬಿಚ್ಚಿಡುತ್ತಿರುವ ಮಾಹಿತಿಗಿಂತ ಅಭಿವೃದ್ಧಿಯ ಪ್ರಮಾಣ ಕಡಿಮೆ ಇದೆ. ಅದು ಇನ್ನೂ ಕೆಳ ಹಂತಕ್ಕೆ ತಲುಪಬಹುದು. ಆದ್ದರಿಂದ ಆರ್ಥಿಕ ಪುನಚ್ಛೇತನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಬಡ್ಡಿ ದರಗಳನ್ನು ಕಡಿಮೆಗೊಳಿಸಬೇಕು. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ ಅನುಕೂಲವಾಗಲಿದೆ. ಜೊತೆಗೆ ಉದ್ಯೋಗದ ಪ್ರಮಾಣವೂ ಹೆಚ್ಚಾಗುತ್ತದೆ ಎಂದಿದ್ದಾರೆ.