ಮಕ್ಕಳ ಕೈಯಲ್ಲಿ ಗಾಯದ ಗುರುತು..! ಇದು ಬ್ಲೂ ವೆಲ್ ಭೂತಾನಾ..?

ಬೆಳಗಾವಿ : ಬ್ಲೂ ವೆಲ್ ಎನ್ನುದೊಂದು ಭಯಾನಕ ಗೇಮ್. ಈ ಗೇಮ್ ಈಗಾಗಲೇ ವಿಶ್ವದಾದ್ಯಂತ ಅನೇಕ ಬಲಿಗಳನ್ನು ಪಡೆದುಕೊಂಡಿದೆ. ಬ್ಲೂ ವೆಲ್ ಆಟ ಆಡುವವರಿಗೆ 57 ದಿನಗಳ ಕಾಲ ವಿವಿಧ ಟಾಸ್ಕ್ ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ಗೇಮ್ ಹುಚ್ಚು ಹೆಚ್ಚಾಗಿ ಮೈ, ಕೈ ಮೇಲೆ ಗಾಯ ಮಾಡಿಕೊಳ್ಳುತ್ತಾರೆ ಸ್ಪರ್ಧಿಗಳು. ಕೊನೆಗೆ ಆತ್ಮಹತ್ಯೆಗೂ ಶರಣಾಗುತ್ತಾರೆ.

ಇಂಥಹ ಮಾರಕ ಗೇಮ್ ಕುಂದಾ ನಗರಿ ಬೆಳಗಾವಿಗೆ ಕಾಲಿಟ್ಟಿದೆ ಎಂಬ ಅನುಮಾನ ಇದೀಗ ಬಲಗೊಂಡಿದೆ. ನಗರದ ಕ್ಯಾಂಪ್ ಪ್ರದೇಶದ ಶಾಲೆಯೊಂದರ ಮಕ್ಕಳು ಈ ಗೇಮ್ ವ್ಯಾಮೋಹಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಆದರೇ ಈ ವಿದ್ಯಾರ್ಥಿಗಳು ಗೇಮ್ ಆಡಿಲ್ಲ, ಬದಲಾಗಿ ಸಹಪಾಠಿಗಳ ಮುಂದೆ ಪೋಸ್ ಕೊಡಲು ಕೈ ಮೇಲೆ ಗಾಯ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯ ಮಾಡಿಕೊಂಡಿದ್ದಾರೆ.

ಈ ವಿಚಾರ ತಿಳಿದ ಶಾಲಾ ಮುಖ್ಯಸ್ಥರು, ವಿದ್ಯಾರ್ಥಿಗಳ ಪೋಷಕರಿಗೆ ತಿಳುವಳಿಕೆ ಹೇಳಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ. ಇನ್ನೂ ಬೆಳಗಾವಿಯಲ್ಲಿ ಬ್ಲೂ ವೆಲ್ ಗೆಮ್ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಇಓ ಬಸವರಾಜ್ ನಾಲತ್ವಾಡ್, ಈ ರೀತಿಯ ಪ್ರಕರಣ ನಡೆದಿಲ್ಲ. ನಾವು ಎಲ್ಲಾ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎನ್ನುತ್ತಾರೆ.

Comments are closed.