WATCH : ಯುವರಾಜ್ vs ಸ್ಟುವರ್ಟ್ ಬ್ರಾಡ್ : 6 ಬಾಲ್ 6 ಸಿಕ್ಸರ್ ದಾಖಲೆಗೆ 10 ವರ್ಷ..!

2007 ವಿಶ್ವಕಪ್ ನ ಇಂಗ್ಲೆಂಡ್ ಹಾಗೂ ಭಾರತ ನಡುವಿನ ಪಂದ್ಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಯಾವತ್ತೂ ಮರೆಯಲಾಗದ್ದು. ಮೊದಲು ಬ್ಯಾಟ್ ಮಾಡುತ್ತಿದ್ದ ಭಾರತದ ಸ್ಕೋರ್ 18 ಓವರ್ಗಳಲ್ಲಿ 171/3 ಆಗಿತ್ತು. ಅದೇ ವೇಳೆ ಇಂಗ್ಲೆಂಡ್ ಆಲ್ರೌಂಡರ್ ಆ್ಯಂಡ್ರೂ ಫ್ಲಿಂಟಾಫ್ ಏನನ್ನೋ ಅಂದು ಯುವರಾಜ್ ಜೊತೆ ಕಿರಿಕ್ ಮಾಡಿಕೊಂಡರು. ಇವರಿಬ್ಬರ ನಡುವೆ ನಡೆದ ಮಾತಿನ ಚಕಮಕಿ ಯುವಿಯನ್ನು ಕೆರಳಿಸಿತ್ತು. ಸಾಮಾನ್ಯವಾಗಿ ಬ್ಯಾಟ್ಸಮನ್ ಕೋಪಗೊಂಡರೆ, ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸುತ್ತಾರೆ. ಅದೇ ಉದ್ದೇಶವನ್ನು ಇಟ್ಟುಕೊಂಡೇ ಫ್ಲಿಂಟಾಫ್ ಯುವಿಯನ್ನು ಕೆಣಕಿದ್ದರು.

 

Image result for yuvraj singh six sixers hd flintoff

ಆದರೆ ಯುವಿ ಮುಂದಿನ ಓವರಿನಲ್ಲಿ ತೋರಿದ ಪರಾಕ್ರಮ, ಫ್ಲಿಂಟಾಫ್ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಮುಂದಿನ ಓವರ್ ಎಸೆಯಲು ಬಂದ ಸ್ಟುವರ್ಟ್ ಬ್ರಾಡ್ ಮೇಲೆ, ಯುವಿ ತಮ್ಮೆಲ್ಲ ಆಕ್ರೋಶವನ್ನು ಹೊರಹಾಕಿದರು. ಒಂದಾದ ನಂತರ ಒಂದರಂತೆ ಬ್ರಾಡ್ ಎಸೆದ ಸತತ 6 ಎಸೆತಗಳನ್ನು ಮೈದಾನದ ಎಲ್ಲ ಮೂಲೆಗಳಿಗೆ ಸಿಕ್ಸರ್ ಬಾರಿಸಿದ ಯುವಿ ದಾಖಲೆ ಬರೆದಿದ್ದರು. ಆ ಪಂದ್ಯ ನಡೆದು ಇಂದಿಗೆ ಸರಿಯಾಗಿ 10 ವರ್ಷಗಳಾಯಿತು. ಕ್ರಿಕೆಟ್ ಫ್ಯಾನ್ಸ್ ಮನಸಿನಲ್ಲಿ ಅಚ್ಚಳಿಯದೆ ಉಳಿದಿರುವ ಈ ದೃಶ್ಯಗಳನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಿ..

Comments are closed.

Social Media Auto Publish Powered By : XYZScripts.com