‘ ನಮ್ಮ ದೇಶಕ್ಕೆ ಬಂದಿದ್ದಕ್ಕೆ ಥ್ಯಾಂಕ್ಸ್ ‘ ಅಂದ ಪಾಕ್ ಫ್ಯಾನ್ಸ್ : ಬುಮ್ರಾ ಪಾಕ್ ಗೆ ಹೋಗಿದ್ರಾ..?

ಭಾರತ ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆದು ನಿಂತು ವರ್ಷಗಳೇ ಕಳೆದುಹೋಗಿವೆ. ಕೇವಲ ಐಸಿಸಿ ಟೂರ್ನಮೆಂಟ್ ಗಳಲ್ಲಿ ಮಾತ್ರ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ. ಅಂಥದರಲ್ಲಿ ಭಾರತದ ಕ್ರಿಕೆಟರ್ ಒಬ್ಬ ಪಾಕಿಸ್ತಾನಕ್ಕೆ ಹೋಗುವ ಸಂದರ್ಭವೇ ಬರುವುದಿಲ್ಲ. ಆದರೆ  ಟೀಮ್ ಇಂಡಿಯಾ ಬೌಲರ್ ಜಸ್ಪ್ರೀತ್ ಬುಮ್ರಾಹ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜವಾಗಿಯೂ ಬುಮ್ರಾಹ್ ಪಾಕಿಸ್ತಾನಕ್ಕೆ ಹೋಗಿದ್ರಾ..? ಇಲ್ಲಿದೆ ಉತ್ತರ..

ಅಸಲಿ ವಿಷಯ ಏನೆಂದರೆ ‘ ಗ್ರೀನ್ ಟೀಮ್ ಪಾಕಿಸ್ತಾನ್ ‘ ಎಂಬ ಫೇಸ್ಬುಕ್ ಪೇಜ್ ಒಂದು ಚಿತ್ರವನ್ನು ಪೋಸ್ಟ್ ಮಾಡಿದೆ. ಅದರಲ್ಲಿ ಭಾರತದ ಜಸ್ಪ್ರೀತ್ ಬುಮ್ರಾಹ್ ಸಹ ಇದ್ದಾರೆ ಎಂದು ಪೇಜ್ ಹೇಳಿಕೊಂಡಿದೆ. ‘ WXI ಪಂದ್ಯಗಳನ್ನು ನೋಡುವುದಕ್ಕೆ ಪಾಕಿಸ್ತಾನಕ್ಕೆ ಬಂದಿದ್ದಕ್ಕೆ ಥ್ಯಾಂಕ್ಯೂ ಜಸ್ಪ್ರೀತ್ ಬುಮ್ರಾಹ್ ‘ ಎಂದು ಬರೆಯಲಾಗಿದೆ. ಆದರೆ ಆ ಚಿತ್ರದಲ್ಲಿರುವ ಯುವಕ ಥೇಟ್ ಬುಮ್ರಾಹ್ ನಂತೆ ಕಾಣುವ ಡೂಪ್ಲಿಕೇಟ್ ಹೊರತು ಅಸಲಿಯಲ್ಲ. ಬುಮ್ರಾಹ್ ಪಾಕಿಸ್ತಾನಕ್ಕೆ ಹೋಗಿಯೂ ಇಲ್ಲ. ಇದು ಕೇವಲ ತಮಾಷೆಗೆ ಹಾಕಿರುವ ಪೋಸ್ಟ್ ನಂತೆ ಕಾಣುತ್ತದೆ.

Comments are closed.

Social Media Auto Publish Powered By : XYZScripts.com