KPL : ಬೆಳಗಾವಿ ವಿರುದ್ಧ ಬಿಜಾಪುರ ಬುಲ್ಸ್ ತಂಡಕ್ಕೆ 1 ರನ್ ರೋಚಕ ಗೆಲುವು

ಹುಬ್ಬಳ್ಳಿಯ ಕೆಎಸ್ ಸಿಎ ಮೈದಾನದಲ್ಲಿ ನಡೆದ ಕೆಪಿಎಲ್ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ರೋಚಕ 1 ರನ್ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಬೆಳಗಾವಿ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಬಿಜಾಪುರ ತಂಡ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಸೇರಿಸಿತು. ಬಿಜಾಪುರ ಪರವಾಗಿ ಭರತ್ ಚಿಪ್ಲಿ 68 ಹಾಗೂ ಕಿರಣ್ 33 ರನ್ ಬಾರಿಸಿದರು. ಬೆಳಗಾವಿಯ ಅವಿನಾಶ್ 3 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಬೆಳಗಾವಿ ತಂಡ 20 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಬೆಳಗಾವಿ ಪರವಾಗಿ ಸ್ಟುವರ್ಟ್ ಬಿನ್ನಿ 55 ರನ್ ಬಾರಿಸಿದರು. ಬಿಜಾಪುರ ತಂಡದ ಪೃಥ್ವಿ ಶೇಖಾವತ್ 2 ವಿಕೆಟ್ ಪಡೆದರು. ಭರತ್ ಚಿಪ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು. ಪಾಯಿಂಟ್ಸ್ ಪಟ್ಟಿಯಲ್ಲಿ ಬಿಜಾಪುರ ಹಾಗೂ ಬೆಳಗಾವಿ ಕ್ರಮವಾಗಿ 1 ಹಾಗೂ 2ನೇ ಸ್ಥಾನದಲ್ಲಿವೆ.

Social Media Auto Publish Powered By : XYZScripts.com