ಹಾರ್ದಿಕ್ ಮ್ಯಾಚ್ ವಿನ್ನಿಂಗ್ ಆಟಕ್ಕೆ ಮನಸೋತ ಶಿಬಾನಿ ದಾಂಡೇಕರ್..!

ಹಾರ್ದಿಕ್ ಪಾಂಡ್ಯ ಈಗ ಟೀಮ್ ಇಂಡಿಯಾದ ಸ್ಟಾರ್ ಆಟಗಾರ. ಸಿಕ್ಸರ್, ಬೌಂಡರಿ ಸಿಡಿಸಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಫೇವರೇಟ್ ಆಟಗಾರ ಎನಿಸಿಕೊಂಡಿದ್ದಾರೆ. ರವಿವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟವಾಡಿ ಮಿಂಚಿದರು. ಮಹೇಂದ್ರ ಸಿಂಗ್ ಧೋನಿ ಜೊತೆ 118 ರನ್ ಅಮೋಘ ಜೊತೆಯಾಟವಾಡಿದ್ದರು ಹಾರ್ದಿಕ್. ಬ್ಯಾಟಿಂಗ್ ನಲ್ಲಿ ಭರ್ಜರಿ 83 ರನ್ ಸಿಡಿಸಿ, ಬೌಲಿಂಗ್ ನಲ್ಲಿ 2 ಪ್ರಮುಖ ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದ ಹಾರ್ದಿಕ್, ಪಂದ್ಯಶ್ರೇಷ್ಟ ಪ್ರಶಸ್ತಿಯನ್ನೂ ಪಡೆದರು. ಪಾಂಡ್ಯ ಆಟದ ಬಗ್ಗೆ ದೇಶದೆಲ್ಲೆಡೆ ಅಭಿಮಾನಿಗಳಿಂದ ಪ್ರಶಂಸೆ, ಮೆಚ್ಚುಗೆ ಕೇಳಿಬರುತ್ತಿದೆ. ಖಾಸಗಿ ವಾಹಿನಿ MTV ಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುವ ಶಿಬಾನಿ ದಾಂಡೇಕರ್ ಸಹ ಹಾರ್ದಿಕ್ ಆಟದ ಬಗ್ಗೆ ಮನಸಾರೆ ಹೊಗಳಿದ್ದಾರೆ. ಟ್ವೀಟ್ ಮಾಡಿರುವ ಶಿಬಾನಿ  ‘ you are gangsta ‘ ಎಂದು ಬರೆದಿದ್ದಾರೆ.

ಈ ಟ್ವೀಟ್ ಗೆ ಹಾರ್ದಿಕ್ ರಿಪ್ಲೈ ಮಾಡಿ ಶಿಬಾನಿಗೆ ಧನ್ಯವಾದ ಹೇಳಿದ್ದಾರೆ.

ಹಾರ್ದಿಕ್ ಧನ್ಯವಾದ ಹೇಳಿ ಮಾಡಿರುವ ಟ್ವೀಟ್ ಗೆ ರಿಪ್ಲೈ ಮಾಡಿರುವ ಶಿಬಾನಿ,  ‘muaaah beast mode ‘ ಎಂದು ಟ್ವೀಟ್ ಮಾಡಿದ್ದಾರೆ.

ಕೆಲ ಅಭಿಮಾನಿಗಳೂ ಟ್ವಿಟರಿನಲ್ಲಿ ಟೀಮ್ ಇಂಡಿಯಾದ ಆಟಗಾರನ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

One thought on “ಹಾರ್ದಿಕ್ ಮ್ಯಾಚ್ ವಿನ್ನಿಂಗ್ ಆಟಕ್ಕೆ ಮನಸೋತ ಶಿಬಾನಿ ದಾಂಡೇಕರ್..!

  • October 20, 2017 at 9:22 PM
    Permalink

    when it comes to free email, i found gmail to be the best and yahoo the worst~

Comments are closed.

Social Media Auto Publish Powered By : XYZScripts.com