ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ವಿಷ ಕುಡಿದ ಬಿಎಂಟಿಸಿ ಚಾಲಕ

ಬೆಂಗಳೂರು : ಮಹಾನಗರ ಸಾರಿಗೆ ಸಂಸ್ಥೆಯ ಡಿಪೋ ಎರಡರ ಮ್ಯಾನೇಜರ್ ಹಾಗೂ ಹಿರಿಯ ಅಧಿಕಾರಿ ಉಗ್ರಪ್ಪ ಅವರ ಕಿರುಕುಳ ತಾಳಲಾರದೆ BMTC ಚಾಲಕ ಮಧು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಚಾಲಕ ಮಧು ಆತ್ಮಹತ್ಯೆ ಯತ್ನ ಖಂಡಿಸಿ ಬಿಎಂಟಿಸಿ ಸಿಬ್ಬಂದಿಗಳು ಪ್ರತಿಭಟನೆ ನೆಡೆಸಿದರು. ಚಾಲಕ ಮಧು ನಿನ್ನೆ ಸಂಜೆ ಆತ್ಮಹತ್ಯೆ ನೆಡೆಸಿದ್ದು ಬೆಳಿಗ್ಗೆ ಕರ್ತವ್ಯಹಾಜರಾದ ಡಿಪೋ ಎರಡರ ನೂರಾರು ಮಂದಿ ಸಿಬ್ಬಂದಿಗಳು ಬಸ್ಸ್ ರಸ್ತೆಗಿಳಿಸದೆ ಬಿಎಂಟಿಸಿ ಹಿರಿಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.

ಡಿಪೋ ಎರಡರ ಸಿಬ್ಬಂದಿಗಳ ಪ್ರತಿಭಟನೆಯಿಂದ 350 ಹೆಚ್ಚು ಬಸ್ಸುಗಳು ರಸ್ತೆಗಿಳಿಯಲಿಲ್ಲ. ಚಾಲಕ ಮಧು ನಿನ್ನೆ ಬೆಳಿಗೆ ಕರ್ತವ್ಯಕ್ಜೆ ಹಾಜರಾದಾಗ ಡಿಪೋ ಮ್ಯಾನೇಜರ್ ಶಿವಪ್ರಕಾಶ್ ಹಾಗೂ ಉಗ್ರಪ್ಪ ಅವರು ರೂಟ್ ಬಸ್ ನೀಡದೆ ಸತಾಯಿಸಿದರು ನಂತರ ಸಂಜೆ ಐದು ಗಂಟೆ ನಂತರ ಮಧುಗೆ ಬಸ್ ನೀಡಲಾಯಿತು. ಅತ್ತಿಬೆಲೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋದ ಮಧು ಮಾನಸಿಕ ನೊಂದಿದ್ದ. ವಾಪಾಸ್ ಬರುವಾಗ ಚಿಕ್ಕ ಅಪಘಾತ ಮಾಡಿ, ನಂತರ ಡಿಪೋಗೆ ಬಂದ ಕೆಲ ಸಮಯದ ನಂತರ ನನ್ನ ಸಾವಿಗೆ ರುದ್ರಪ್ಪ ಕಾರಣ ಎಂದು ಬಿದ್ದ ಒದ್ದಾಡತೊಡಗಿದ ಅಷ್ಟರಲ್ಲಿ ಅವನು ವಿಷ ಸೇವಿಸಿರುವುದು ತಿಳಿದು ಕೂಡಲೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಮಧು ಜೊತೆಗೆ ಕರ್ತವ್ಯ ನಿರ್ವಹಿಸಿದ ನಿರ್ವಾಹಕ ಮುತ್ತುರಾಜ್ ಹೇಳಿದರು.

ಪ್ರತಿಭಟನೆ ನೇತೃತ್ವ ವಹಿಸಿದ ಬಿಎಂಟಿಸಿ ಉದ್ಯೋಗಿಗಳ ಸಂಘದ ಮುಖಂಡ ನಾಗರಾಜು ಮಾತನಾಡಿ ಬಿಎಂಟಿಸಿ ಅಧಿಕಾರಿಗಳ ಮಟ್ಟದಲ್ಲಿ ಭೃಷ್ಟಾಚಾರ ತುಂಬುತುಳುಕುತ್ತಿದೆ, ಇಲ್ಲಿ ಸಿಬ್ಬಂದಿಗಳು ರಜೆ ಪಡೆಯಲು, ಬಸ್ ರೂಟ್ ಪಡೆಯಲು, ಪಾಳಿ ಬದಲಾಯಿಸಲು ಸಹಿತ ಪ್ರತಿಯೊಂದಕ್ಕೂ ಸಂಬಂಧಪಟ್ಟ ಅಧಿಕಾರಿಗಳಿಗೆ ಲಂಚ ನೀಡಬೇಕು. ಬಸ್ ಗಳ ನಿರ್ವಹಣೆಯಂತೂ ತೀರ ಕಳಪೆಯಾಗಿದೆ ಕೆಲವು ಬಸ್ಸಗಳಲ್ಲಿ ಬ್ರೇಕ್ ಕೆಲಸ ಮಾಡಲ್ಲ, ಇಂಜಿನ್ ಆಯಿಲ್ ಸರಿಯಾಗಿ ಹಾಕಲ್ಲ, ಬಸ್ಸುಗಳ ಬಿಡಿಭಾಗಗಳ ಖರೀದಿಯಲ್ಲೂ ದೊಡ್ಡ ಪ್ರಮಾಣದ ಭೃಷ್ಟಾಚಾರ ನಡೆಯುತ್ತಿದೆ ಎಂದು ನಾಗರಾಜ್ ಹೇಳಿದರು. ಭೃಷ್ಟಾಚಾರದಲ್ಲಿ ತೊಡಗಿದ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಪಾರದರ್ಶಕತೆ ತರಬೇಕು. ಬಸ್ಸುಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು ಎಂದು ನಾಗರಾಜ್ ಒತ್ತಾಯಿಸಿದರು. ಮಹಿಳಾ ಸಿಬ್ಬಂದಿಗಳ ಪರವಾಗಿ ಮಾತನಾಡಿದ ಉಮಾ ಹಿರಿಯ ಅಧಿಕಾರಿಗಳು ಮಹಿಳಾ ಸಿಬ್ಬಂದಿಗಳಿಗೆ ನಾನಾರೀತಿಯ ಕಿರುಕುಳ ನೀಡಲಾಗುತ್ತದೆ. ಮಹಿಳಾ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

Social Media Auto Publish Powered By : XYZScripts.com