49ನೇ ವಸಂತಕ್ಕೆ ಕಾಲಿಟ್ಟ ಉಪ್ಪಿ : ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿದ ರಿಯಲ್ ಸ್ಟಾರ್

ನಟ ರಿಯಲ್ ಸ್ಟಾರ್ ಉಪೇಂದ್ರ ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.  ನೂರಾರು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಮಳೆಯ ನಡುವೆಯು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದಾರೆ. ಕತ್ರಿಗುಪ್ಪೆ ಮನೆ ಬಳಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಉಪೇಂದ್ರಗೆ ನೂರಾರು ಅಭಿಮಾನಿಗಳು ಶುಭಾಷಯ ಕೋರಿದ್ದಾರೆ. ಸಹಿ ಹಂಚಿ ಉಪ್ಪಿ ಹುಟ್ಟು ಹಬ್ಬ ಆಚರಿಸಲಾಗಿದೆ. ಉಪೇಂದ್ರ ಪತ್ನಿ ನಟಿ ಪ್ರಿಯಾಂಕ ಸೇರಿದಂತೆ ಕುಟುಂಬಸ್ಥರ ಜೊತೆ ಉಪ್ಪಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಸಾಲು ಗಟ್ಟಿ ನಿಂತು ಉಪ್ಪಿಗೆ ಅಭಿಮಾನಿಗಳು ಶುಭಾಶಯ ಕೋರಿದ್ಧಾರೆ.  ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರಿಂದ ಉಪ್ಪಿ ಮನೆ ಬಳಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಹುಟ್ಟುಹಬ್ಬದ ಪ್ರಯುಕ್ತ ಉಪೇಂದ್ರ ಮತ್ತೆ ಹುಟ್ಟಿ ಬಾ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಉಪೇಂದ್ರ ಕುರಿತಾದ ‘ನಮ್ಮ ಉಪ್ಪಿ ಹತ್ತಿರದವರು ಕಂಡಂತೆ’ ಪುಸ್ತಕ ಬಿಡುಗಡೆ ಮಾಡಲಾಗಿದೆ. ಇದು ಉಪೇಂದ್ರ ಹುಟ್ಟುಹಬ್ಬದ ವಿಶೇಷ  ಉಪೇಂದ್ರ ಅಭಿಮಾನಿ ಉದಯ್ ಉಪೇಂದ್ರ ಅವ್ರ ೫೦ ಸಿನಿಮಾಗಳನ್ನ ಸೇರಿಸಿ ಟ್ರೇಲರ್ ಸಿದ್ದಪಡಿಸಲಾಗಿದೆ. ಟ್ರೇಲರ್ ನೋಡಿ ಉಪೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.

One thought on “49ನೇ ವಸಂತಕ್ಕೆ ಕಾಲಿಟ್ಟ ಉಪ್ಪಿ : ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿದ ರಿಯಲ್ ಸ್ಟಾರ್

  • October 20, 2017 at 9:55 PM
    Permalink

    very good post, i certainly adore this excellent website, persist in it

Comments are closed.