“ಮಿ.ಪರ್ಫೆಕ್ಟ್‌” ಬಾಹುಬಲಿ ಪ್ರಭಾಸ್‌ ಚಿತ್ರ ಕೃತಿಚೌರ್ಯವೇ ?

ಮುಂಬೈ : ಬಾಹುಬಲಿ ಖ್ಯಾತಿಯ ಪ್ರಭಾಸ್‌ ಅಭಿನಯಿಸಿದ್ದ ಮಿ.ಪರ್ಫೆಕ್ಟ್‌ ಸಿನಿಮಾಗೆ ಸಂಕಷ್ಟ ಎದುರಾಗಿದೆ. ಸಿನಿಮಾದ ನಿರ್ಮಾಪಕ ದಿಲ್‌ರಾಜು ಶ್ಯಾಮಲಾ ರಾಣಿ ಎಂಬ ಲೇಖಕಿ ಬರೆದಿರುವ ನಾ ಮನಸು ನೀ ಕೋರೆ ಎಂಬ ಪುಸ್ತಕದಿಂದ ಆಯ್ದ ಕಥೆಯನ್ನು ಸಿನಿಮಾ ಮಾಡಿದ್ದು, ಕೃತಿ ಚೌರ್ಯ ಮಾಡಿರುವುದಾಗಿ ಆರೋಪಿಸಿದ್ದಾರೆ.

ಜೊತೆಗೆ ಮಿ.ಪರ್ಫೆಕ್ಟ್‌ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ದ ಶ್ಯಾಮಲಾ ರಾಣಿ ದೂರು ದಾಖಲಿಸಿದ್ದಾರೆ. ಕಾದಂಬರಿ ಹಾಗೂ ಸಿನಿಮಾದ ಕಥೆಗೆ ಹೋಲಿಕೆ ಮಾಡಿ ನೋಡಲಾಗುತ್ತಿರುವುದಾಗಿ ಮಾಧಾಪುರ ಡಿಸಿಪಿ ವಿಶ್ವ ಪ್ರಸಾದ್‌ ಹೇಳಿದ್ದಾರೆ.

 

Comments are closed.

Social Media Auto Publish Powered By : XYZScripts.com