ಚೆನ್ನೈ ಏರ್ಪೋರ್ಟ್ನಲ್ಲಿ ನೆಲದ ಮೇಲೆಯೇ ಮಲಗಿದ ಕೂಲ್ ಧೋನಿ..!
ಚೆನ್ನೈ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 26 ರನ್ ಗಳಿಂದ ಮಣಿಸಿದ ನಂತರ ಟೀಮ್ ಇಂಡಿಯಾದ ಆಟಗಾರರು ರಿಲ್ಯಾಕ್ಸ್ ಮೂಡಲ್ಲಿ ಕಂಡುಬಂದರು. ಮುಂದಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಗುರುವಾರ ನಡೆಯಲಿದೆ. ಭಾರತದ ಆಟಗಾರರು ಚೆನ್ನೈನಿಂದ ಕೋಲ್ಕತ್ತಾಗೆ ಪ್ರಯಾಣ ಬೆಳೆಸುವ ಮುನ್ನ ಚೆನ್ನೈ ಏರಪೋರ್ಟಲ್ಲಿ ವಿಮಾನಕ್ಕಾಗಿ ಕಾಯುತ್ತ ಕುಳಿತಿದ್ದರು.
ಈ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಉಳಿದ ಆಟಗಾರರು ಕುಳಿತಿದ್ದರೆ ಕೂಲ್ ಮಹೇಂದ್ರ ಸಿಂಗ್ ಧೋನಿ ಮಾತ್ರ ಅಲ್ಲಿ ನೆಲದ ಮೇಲೆಯೇ ಮಲಗಿದ್ದಾರೆ. ಶ್ರೀಲಂಕಾ ಸರಣಿಯ ಮೂರನೇ ಏಕದಿನ ಪಂದ್ಯದ ವೇಳೆ ಮೈದಾನದಲ್ಲಿ ಮಲಗಿದ್ದ, ಧೋನಿ ಈಗ ಏರ್ಪೋರ್ಟಲ್ಲಿ ಮಲಗಿ ತಾವು ಎಷ್ಟು ಕೂಲ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ಧಾರೆ. ಈ ಚಿತ್ರಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿದೆ.