ಪಾಕಿಸ್ತಾನದ ಪೋಲೀಸ್ ವಿರಾಟ್ ಕೊಹ್ಲಿಗೆ ಕೇಳಿದ್ದೇನು..? ಶಾಕ್ ಆದ ಫ್ಯಾನ್ಸ್..!

ಇಂಗ್ಲೆಂಡಿನ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ‘ ಮ್ಯಾರಿ ಮಿ ಕೊಹ್ಲಿ’ ಎಂದು ಕೇಳಿದ್ದರು. ಈ ವಿಷಯ ಎಲ್ಲರಿಗೂ ಗೊತ್ತಿರುವಂಥದ್ದೇ, ಆದರೆ ಅಂಥದೇ ಘಟನೆ ಮತ್ತೆ ಮರುಕಳಿಸಿದೆ. ಪಾಕಿಸ್ತಾನದ ವ್ಯಕ್ತಿಯೊಬ್ಬರು ‘ ಕೊಹ್ಲಿ ನನ್ನ ಮದುವೆಯಾಗು ‘ ಎಂದು ಕೇಳಿದ್ದಾರೆ. ಆದರೆ ಕೇಳಿದ್ದು ಹುಡುಗಿ ಅಲ್ಲ, ಬದಲಾಗಿ ಪಾಕಿಸ್ತಾನದ ಪೋಲೀಸ್ ಪೇದೆ. ವಿಶ್ವ ಇಲೆವನ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟಿ-20 ಪಂದ್ಯದ ವೇಳೆ ಈ ಪೋಲೀಸ್ ಕೈಯಲ್ಲಿ ಬೋರ್ಡ್ ಒಂದನ್ನು ಹಿಡಿದು ಪ್ರದರ್ಶಿಸಿದ್ದಾರೆ.

ಅದರ ಮೇಲೆ ‘ಕೊಹ್ಲಿ ಮ್ಯಾರಿ ಮಿ ‘ ಎಂದು ಬರೆಯಲಾಗಿತ್ತು. ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿಯ ಅಭಿಮಾನಿಗಳಿಗೇನು ಕೊರತೆಯಿಲ್ಲ, ಆದರೆ ಪೋಲೀಸ್ ಪೇದೆಯೊಬ್ಬ ನನ್ನನ್ನು ಮದುವೆಯಾಗು ಎಂದಿದ್ದು ಮಾತ್ರ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದೆ.

Comments are closed.

Social Media Auto Publish Powered By : XYZScripts.com