ಪ್ರೀತಿಸುವ ಹುಡುಗನಲ್ಲಿ ಈ ಐದು ಗುಣಗಳಿದ್ದರೆ ಮದುವೆಯಾಗ್ಬೇಡಿ..!

ಜೀವನದಲ್ಲಿ ಮದುವೆಯಾಗುವುದು ಒಮ್ಮೆ ಮಾತ್ರ. ಮಗದೊಂದನ್ನು ಮಾಡಿಕೊಳ್ಳುವ ಅವಕಾಶವಿದ್ದರು ಸಹ ಅದು ಅನೀವಾರ್ಯದಿಂದಲೇ ಹೊರತು ಅವಕಾಶದಿಂದಲ್ಲ ಎನ್ನುವುದು ಸಹಜ ಪರಿಕಲ್ಪನೆ. ಅವಕಾಶದಿಂದಲೂ ನಾಲ್ಕೈದು ಮಂದಿಯನ್ನು ಮದುವೆಯಾಗುವ ಜನರನ್ನು ಕಂಡಿದ್ದೇವೆ. ಅವರವರ ವೈಯ್ಯಕ್ತಿಕ ಆಸಕ್ತಿಗೆ ಬಿಟ್ಟದ್ದು. ಹೆಣ್ಣು ಮಕ್ಕಳನ್ನು ಸಾಕಿ-ಸಲಹಿ ಪೋಷಣೆ ಮಾಡುವುದು ಸುಲಭದ ಮಾತಲ್ಲ, ‘ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಮನೇಲಿದ್ರೆ ಬೆಂಕಿ ಕೆಂಡ ಬಗಲಲ್ಲಿ ಇದ್ದಹಾಗೆ’ ಎನ್ನುವ ಮಾತುಗಳನ್ನು ನಾವು ಕೇಳಿರುತ್ತೇವೆ. ಹೀಗಿರುವಾಗ ನವ ಶತಮಾನದ ಹೆಣ್ಣು ಮಕ್ಕಳು, ಬಾಳ ಸಂಗಾತಿಯನ್ನು ಆರಿಸುವಾಗ ಎಚ್ಚರ ವಹಿಸುವುದು ಉತ್ತಮ. ಆತುರವಾಗಿ ಯಾವುದನ್ನು ನಿರ್ಧರಿಸುವುದು ತರವಲ್ಲ, ಅದೂ ಮದುವೆಯಾಗುವ ಹುಡುಗನ ಆಯ್ಕೆ ವಿಚಾರದಲ್ಲಿ ಹೆಚ್ಚು ಗಮನ ಕೊಡುವುದು ಒಳಿತು. ಹಾಗಾದರೆ ನಿಮ್ಮ ಹುಡುಗನಲ್ಲಿ ಯಾವ ಗುಣಗಳಿದ್ದರೆ ಅವನನ್ನು ನಿರಾಕರಿಸುವುದು? ಇಲ್ಲಿದೆ ಉತ್ತರ..

  1. ನಿಮ್ಮನ್ನು ದೈಹಿಕವಾಗಿ ದಂಡಿಸದಿದ್ದರೂ, ವಿಕೃತವಾಗಿ ವರ್ತಿಸುವುದು : ಹಲವಾರು ಸಂದರ್ಭಗಳಲ್ಲಿ ನೀವು ಪ್ರೀತಿಸುವ ಹುಡುಗ ಕೈಯೆತ್ತಿ ಹೊಡೆಯದಿದ್ದರೂ ಕೆಲವೊಮ್ಮೆ ಅಶ್ಲೀಲವಾದ ಮಾತುಗಳಿಂದ ನಿಂದಿಸಿ ಮಾನಸಿಕವಾಗಿ ಘಾಸಿಗೊಳಿಸುವುದು. ಇಲ್ಲದ್ದಿದ್ದಲ್ಲಿ ಉದಾಹರಣೆಗೆ ಕೈಯಲ್ಲಿನ ಮೊಬೈಲ್, ವಾಚ್, ಸಿಕ್ಕ-ಸಿಕ್ಕ ಕೈಯಲ್ಲಿನ ವಸ್ತುಗಳನ್ನು ಕಿತ್ತೊಗೆಯುವುದನ್ನು ಮಾಡಿದರೆ ಆತನಿಂದ ದೂರ ಉಳಿಯುವುದು ಉತ್ತಮ.

 

  1. ಪರ ಸ್ತ್ರೀ ಸಹವಾಸ : ನಿಮ್ಮೊಂದಿಗೆ ಸಂಬಂಧದಲ್ಲಿದ್ದರೂ ಸಹ ಪರ ಸ್ತ್ರೀಯೊಡನೆ ಮಾತುಕತೆ, ಒಡನಾಟ ಮಾಡುವವರನ್ನು ಕೊಂಚ ನಿಗಾವಹಿಸಿ ನೋಡಿಕೊಳ್ಳಿ. ಅವರ ಹಾವಭಾವಗಳ ಮೂಲಕ ಅಂತಹ ಲಕ್ಷಣಗಳನ್ನು ಕಂಡುಹಿಡಿಯಬಹುದು.

 

  1. ಸ್ವತಂತ್ರವನ್ನು ಕಸಿಯುವುದು : ನಿಮ್ಮ ಪ್ರತೀ ಅಭಿಪ್ರಾಯಗಳಿಗನ್ನು ತಪ್ಪು ಎಂದು ಖಂಡಿಸುವುದರ ಜೊತೆಗೆ ನಿಮ್ಮ ನಡೆಯನ್ನು ಯಾವಾಗಲು ಅನ್ಯತ ಭಾವದಿಂದ ಕಾಣುವುದು. ಹೊದ-ಬಂದಲೆಲ್ಲ ‘ಅದು ಮಾಡಬೇಡ, ಇದು ಮಾಡಬೇಡವೆಂದು’ ನಿಮ್ಮ ಸ್ವತಂತ್ರವನ್ನು ಕಸಿಯುವುದು.

  1. ಚಟಗಳ ದಾಸನಾದವನ್ನು ತಿರಸ್ಕರಿಸಿ : ಬೀಡಿ-ಸಿಗರೇಟ್, ಗುಟ್ಕಾ, ಮಧ್ಯವ್ಯಸನ ಮುಂತಾಂದ ಚಟಗಳಿಗೆ ದಾಸನಾದವನಿಂದ ದೂರ ಉಳಿವುದು ಉತ್ತಮ. ಇವುಗಳು ಮುಂದಿನ ಸಂಸಾರದ ಜೀವನದಲ್ಲಿ ನಿಮ್ಮ ನಡುವೆ ಬಿರುಕು ತರುವ ಸಂಗತಿಗಳು ಮತ್ತು ವಿಷಮಕಾರಿ ಸಂದರ್ಭಗಳನ್ನು ತಂದೊಡ್ಡುವ ಅವಕಾಶಗಳು ಹೆಚ್ಚಿರುತ್ತದೆ.

 

  1. ಸುಳ್ಳು ಹೇಳುವವರಿಂದ ದೂರವಿರಿ : ವ್ಯಕ್ತಿ ಗುಣದಿಂದ ನಿಷ್ಟೂರನಾದರು, ಸುಳ್ಳು ಹೇಳುವ ಗಂಡಸರಿಂದ ದೂರವಿರುವುದು ಉತ್ತಮ. ಹಾಗಾಗಿ ನಿಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಹೆಚ್ಚು ಸೂಕ್ಷ್ಮವಾಗಿರುವುದು ಒಳಿತು.

Comments are closed.

Social Media Auto Publish Powered By : XYZScripts.com