ಮೋದಿ ಮರುಳು ಮಾತಾಡಿ ಜನರನ್ನು ಮೋಸಗೊಳಿಸಿದ್ದಾರೆ : ಇಕ್ಬಾಲ್‌ ಅನ್ಸಾರಿ

ಕೊಪ್ಪಳ : ಪ್ರಧಾನಿ ಮೋದಿ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಅವರಿಗೆ ಹುಟ್ಟು ಹಬ್ಬ ಶುಭಾಶಯ ಕೋರುವ ಬದಲು ಶಾಸಕ ಇಕ್ಬಾಲ್‌ ಅನ್ಸಾರಿ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೈದರಾಬಾದ್‌- ಕರ್ನಾಟಕ ವಿಮೋಚನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಶಾಸಕ ಇಕ್ಬಾಲ್‌ ಅನ್ಸಾರಿ, ಜನರನ್ನು ಮರುಳು ಮಾಡಿ ಮೋದಿ ಪ್ರಧಾನಿಯಾಗಿದ್ದಾರೆ. ಕಪ್ಪು ಹಣ ವಾಪಸ್‌ ತರುತ್ತೇನೆಂದು ಜನರಿಗೆ ಮೋದಿ ಮೋಸ ಮಾಡಿದ್ದಾರೆ. ಕೇವಲ ಗ್ರಾಮಕ್ಕೆ ಒಂದೆರಡು ಗ್ಯಾಸ್‌ ವಿತರಣೆ ಮಾಡುವ ಮೂಲಕ ಮೋದಿ ಇದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ಇದರ ಬದಲು ದೇಶದ ಎಲ್ಲಾ ಗ್ರಾಮದ ಪ್ರತಿಯೊಬ್ಬರಿಗೂ ಗ್ಯಾಸ್ ವಿತರಣೆ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

 

 

Comments are closed.

Social Media Auto Publish Powered By : XYZScripts.com