ಮಳೆಗಾಲದ ಮನಾಲಿ ಕೊಡಗಿನ ತಡಿಯಂಡಮೋಳ….

ಮಳೆಗಾಲ ಬಂತು ಎಂದರೆ ಎಲ್ಲರಿಗೂ ಅದೇನೋ ಕುತೂಹಲ.. ಮಳೆಗಾಲ ಅಂದ್ರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ ಅದ್ರಲ್ಲೂ ಚಾರಣಿಗರಿಗಂತು ಈ ಮಾನ್ಸೂನ್ ಆರಂಭದ ಜೂನ್ ಜುಲೈ ತಿಂಗಳು ಬಂತು ಅಂದ್ರೆ ಅವರ ಕಣ್ಮನ ಸೆಳೆಯೋ ಹಾಗೂ ಅವರ ಸಾಹಸಕ್ಕೆ ಸವಾಲು ಹಾಕೋ ಒಂದು ಸ್ಥಳ ಅಂದ್ರೆ ಅದೇ ಕೊಡಗಿನ ತಡಿಯಂಡಮೋಳ . ಇದು ಕೊಡಗಿನ ಅತೀ ಎತ್ತರದ ಬೆಟ್ಟ ಪ್ರದೇಶವಾಗಿದ್ದರೆ, ರಾಜ್ಯದ ಎರಡನೇ ಎತ್ತರದ ಪ್ರದೇಶವಾಗಿದೆ. (ಎತ್ತರ – 1748 ಮೀಟರ್)

ಚಾರಣಿಗರ ನೆಚ್ಚಿನ ತಾಣ:
ಕಾವೇರಿ ಹುಟ್ಟುವ ಕೊಡಗು ಸಂಪೂರ್ಣವಾಗಿ ಸಹ್ಯಾದ್ರಿ ಬೆಟ್ಟದ ಸಾಲಿನಿಂದ ಸುತ್ತುವರೆದಿದ್ದು ಇಲ್ಲಿ ಚಾರಣಿಗರಿಗೆ ತಮ್ಮ ಸಾಹಸವನ್ನು ಓರೆಗೆ ಹಚ್ಚಲು ಹತ್ತು ಹಲವಾರು ಬೆಟ್ಟ ಪ್ರದೇಶಗಳಿವೆ. ಆದ್ರೆ ಎಲ್ಲರನ್ನೂ ತನ್ನಡೆಗೆ ಬರಸೆಳೆಯೋದು ತಡಿಯಂಡಮೋಳ ಬೆಟ್ಟ ಪ್ರದೇಶ. ಈ ಬೆಟ್ಟ ಪ್ರದೇಶ ಚಾರಣಿಗರಿಗೆ ಹೇಳಿ ಮಾಡಿಸಿದ ಪ್ರದೇಶವಾಗಿದ್ದು, ಜೂನ್ ತಿಂಗಳಿಂದ ಜನವರಿಯ ವರೆಗೆ ಇಲ್ಲಿ ಚಾರಣ (ಟ್ರಕ್ಕಿಂಗ್) ಮಾಡಲು ಸೂಕ್ತ ಸಮಯ. ಹೀಗಾಗಿ ದೇಶದ ನಾನಾ ಕಡೆಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಈ ಬೆಟ್ಟದ ತುದಿ ತಲುಪುವುದು ನಿಜಕ್ಕೂ ಸವಾಲಿನ ಕೆಲಸ.
ಕೂಲ್ ವೆದರ್:


ಜೂನ್ ತಿಂಗಳಿಂದ ಜನವರಿಯ ಅಂತ್ಯದ ತನಕ ಇಲ್ಲಿನ ವಾತಾವರಣದಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ವಿಪರೀಪ ಮಳೆ ಇದ್ದರೆ, ಉಳಿದ ತಿಂಗಳು ತಂಪಾದ ವಾತಾವರಣದಿಂದ ಕೂಡಿರುತ್ತದೆ. ಹೀಗಾಗಿ ಈ ಪ್ರದೇಶ ಚಾರಣಿಗರ ನೆಚ್ಚಿನ ತಾಣವಾಗಿದೆ.

ಎವರ್ ರಾಫ್ಟಿಂಗ್ :
ಸಾಹಸಿಗರಿಗೆ ಇಷ್ಟವಾಗವ ಹಾಗೂ ಹೇಳಿ ಮಾಡಿಸಿದ ಆಟ ಎಂದರೇ ರಿವರ್ ರಾಫ್ಟಿಂಗ್ . ತಡಿಯಂಡಮೋಳ ಬೆಟ್ಟ ಪ್ರದೇಶದಲ್ಲಿ ನೀರಿನ ಜರಿ ಇದ್ದು, ಅದೇ ನೀರಿನಲ್ಲಿ ದೋಣಿಯಲ್ಲಿ ರಿವರ್ ರಾಫ್ಟಿಂಗ್ ಮಾಡುವುದು ಒಂದು ಅದ್ಭುತವಾದ ಅನುಭವವನ್ನು ನೀಡುತ್ತದೆ.

ಇಗ್ಗುತಪ್ಪ:
ತಡಿಯಂಡಮೋಳ ಬೆಟ್ಟದ ತುದಿಯಲ್ಲಿರುವ ಇಗ್ಗುತಪ್ಪ ದೇವಾಲಯ ಕೊಡಗಿನ ಜನರ ನೆಚ್ಚಿನ ಧಾರ್ಮಿಕ ಕ್ಷೇತ್ರವೂ ಆಗಿರುವುದು ವಿಶೇಷ. ಈ ದೇವಾಲಯ ಅತ್ಯಂತ ಶಕ್ತಿಯುತವಾದದ್ದು ಎಂಬುದು ಸ್ಥಳೀಯರ ನಂಬಿಕೆ. ಹೀಗಾಗಿ ಈ ದೇಗುಲಕ್ಕೆ ಸ್ಥಳೀಯರು ಸಹ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ.


ವಿಶೇಷ ವನ್ಯಧಾಮ :
ಇದು ಸಹ್ಯಾದ್ರಿ ಬೆಟ್ಟಸಾಲಿನ ಪ್ರದೇಶವಾಗಿದ್ದು, ಅನೇಕ ವಿಶಿಷ್ಠವಾದ ಸಸ್ಯ ಹಾಗೂ ಜೀವ ಸಂಕುಲಗಳಿಂದ ತುಂಬಿರುವುದು ವಿಶೇಷ. ಈ ಬೆಟ್ಟ ಪ್ರದೇಶದಲ್ಲಿ ಹಲವಾರು ಆಯುರ್ವೇದಿಕ್ ಸಸ್ಯ ಸಂಕುಲವಿದ್ದು, ದೇಶಿ ವೈದ್ಯಕೀಯ ಪದ್ಧತಿಯಲ್ಲಿ ತೊಡಗಿರುವವರಿಗೂ ಇದು ನೆಚ್ಚಿನ ತಾಣ ಎಂದರೆ ತಪ್ಪಾಗಲಾರದು.

ತಲುಪುವುದು ಹೇಗೆ :
ಈ ಪ್ರದೇಶ ಕೊಡಗಿನಿಂದ 35 ಕಿಮೀ ದೂರದಲ್ಲಿದೆ. ಈ ಪ್ರದೇಶದ ಸುತ್ತಮುತ್ತ ಅನೇಕ ಹೋಟೆಲ್ ಹಾಗೂ ಹೋಮ್ ಸ್ಟೇ ವ್ಯವಸ್ಥೆಯಿದ್ದು ಪ್ರವಾಸಿಗರಿಗೆ ಎಲ್ಲಾ ಸೌಲಭ್ಯಗಳೂ ಸುಲಭವಾಗಿ ದೊರೆಯುತ್ತದೆ.

One thought on “ಮಳೆಗಾಲದ ಮನಾಲಿ ಕೊಡಗಿನ ತಡಿಯಂಡಮೋಳ….

  • October 20, 2017 at 9:22 PM
    Permalink

    I’m impressed, I have to admit. Genuinely rarely do you encounter a blog that’s both educative and entertaining, and without a doubt, you could have hit the nail to the head. Your concept is outstanding; ab muscles something inadequate people are speaking intelligently about. We’re happy i found this during my seek out something in regards to this.

Comments are closed.

Social Media Auto Publish Powered By : XYZScripts.com