ಅತಿಯಾಗಿ Facebook ಬಳಸಬೇಡ ಎಂದು ಬೈದಿದ್ದ ಅಣ್ಣ : ಆತ್ಮಹತ್ಯೆ ಮಾಡಿಕೊಂಡ ತಂಗಿ..!

ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ 11 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿನ ಕೋಣೆಯೊಂದರಲ್ಲಿ ಸೀಲಿಂಗ್ ಫ್ಯಾನಿಗೆ ಬಟ್ಟೆಯೊಂದನ್ನು ಕಟ್ಟಿ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪಾಲಕರು ತಿಳಿಸಿದ್ದಾರೆ. ಶುಕ್ರವಾರ ಸಾಯಂಕಾಲ ಮನೆಯವರೆಲ್ಲ ಸಂಬಂಧಿಕರೊಬ್ಬರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದಾರೆ. 8 ಗಂಟೆಗೆ ಮನೆಗೆ ವಾಪಸಾದಾಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಹುಡುಗಿಗೆ ಆಕೆಯ ಅಣ್ಣ ಫೇಸ್ಬುಕ್ ಬಳಸಬೇಡ ಎಂದು ಬೈದಿದ್ದೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.  ‘ ಯಾವಾಗಲೂ ಮೊಬೈಲಿನಲ್ಲೇ ಮುಳುಗಿರುತ್ತಿದ್ದಳು. ಇತ್ತೀಚೆಗೆ ಸರಿಯಾಗಿ ಊಟವನ್ನೂ ಮಾಡುತ್ತಿರಲಿಲ್ಲ. ವಿದ್ಯಾಭ್ಯಾಸದಲ್ಲೂ ಆಸಕ್ತಿ ಕಳೆದುಕೊಂಡಿದ್ದಳು. ಶಾಲೆಗೆ ಹೋಗಲೂ ಸಹ ನಿರಾಕರಿಸುತ್ತಿದ್ದಳು ‘ ಎಂದು ಹುಡುಗಿಯ ತಾಯಿ ಹೇಳಿದ್ದಾರೆ.

‘ ಇಷ್ಟು ಕ್ಷುಲ್ಲಕ ಕಾರಣಕ್ಕಾಗಿ ಇಂತಹ ಅನಾಹುತ ಮಾಡಿಕೊಳ್ಳಬಹುದೆಂದು ನಾನು ಅಂದುಕೊಂಡಿರಲಿಲ್ಲ ‘ ಎಂದು ಹುಡುಗಿಯ ಅಕ್ಕ ಹೇಳಿದ್ದಾರೆ.

Comments are closed.

Social Media Auto Publish Powered By : XYZScripts.com