ನುಡಿ ಸಮಾನತೆಯತ್ತ ನಮ್ಮ ನಡೆ : ಪ್ರೆಸ್‌ಕ್ಲಬ್‌ನಲ್ಲಿ ವಿಚಾರ ಸಂಕೀರ್ಣ

ಬೆಂಗಳೂರು : ನಮ್ಮ ಮೆಟ್ರೋ ಹಿಂದಿ ಬೇಡ ಚಳುವಳಿಯ ಬಗ್ಗೆ ಬರೆಯಲಾದ ಹೊಸ ಪುಸ್ತಕ ಬಿಡುಗಡೆ ಸಮಾರಂಭವನ್ನು ಭಾನುವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ. ಜೊತೆಗೆ ಅಂದೇ ಬೆಂಗಳೂರಿನ ಪ್ರೆಸ್‌ ಕ್ಲಬ್‌ ಆವರಣದಲ್ಲಿ ಏರ್ಪಡಿಸಲಾಗಿರುವ ನುಡಿ ಸಮಾನತೆಯತ್ತ ನಮ್ಮ ನಡೆ ವಿಚಾರ ಸಂಕೀರ್ಣವನ್ನೂ ಹಮ್ಮಿಕೊಳ್ಳಲಾಗಿದೆ.

ಹಿಂದಿ ಹೇರಿಕೆಯ ತೊಂದರೆಗಳೇನು? ಅದರಿಂದ ಕನ್ನಡಿಗರಿಗೆ ಉದ್ಯೋಗ, ಗ್ರಾಹಕಸೇವೆ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಆಗುತ್ತಿರುವ ತೊಡಕುಗಳೇನು ಎಂಬ ಬಗ್ಗೆ ಇಂದು ಬಹುತೇಕರಿಗೆ ಅರಿವಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಭಾಷಾ ಸಮಾನತೆಗಾಗಿ ದನಿ ಎತ್ತುವುದು, ಪತ್ರಿಕೆಗಳಿಗೆ ಪತ್ರ ಬರೆಯುವುದು ಮಾಡುತ್ತಲೇ ಬಂದಿದ್ದಾಗಿದೆ. ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಭಾರತದ ಸಂವಿಧಾನದ ಎಂಟನೆಯ ಶೆಡ್ಯೂಲಿನಲ್ಲಿರುವ ಎಲ್ಲ ನುಡಿಗಳಿಗೂ ಅಧಿಕೃತ ಸ್ಥಾನಮಾನ ಸಿಗಬೇಕು ಅಂದರೆ ಏನಾಗಬೇಕು? ಸಂವಿಧಾನದ ತಿದ್ದುಪಡಿಗೆ ಆಗಬೇಕಾದ ಕೆಲಸಗಳೇನು? ಬೇರೆ ಬೇರೆ ಭಾಷಿಕರ ನಡುವೆ ಸಮನ್ವಯದ ರೀತಿ ನೀತಿ ಏನು? ರಾಜಕೀಯ ಪಕ್ಷಗಳ ಜವಾಬ್ದಾರಿ ಏನು? ಎಲ್ಲವನ್ನು ಚರ್ಚಿಸುವ ಹೊತ್ತು ಈಗ ಬಂದಿದೆ. ಈ ಭಾನುವಾರ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ಮುಂದಿನ ದಾರಿಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಭಾಷಾ ಸಮಾನತೆಯ ನೆಲೆಯಲ್ಲಿ ಭಾರತದ ಒಗ್ಗಟ್ಟು ಬಯಸುವ ಎಲ್ಲ ಮನಸ್ಸುಗಳು ಇಲ್ಲಿರಬೇಕು. ನೀವೂ ಬನ್ನಿ, ಗೆಳೆಯರನ್ನೂ ಕರೆ ತನ್ನಿ..

Comments are closed.